ಧ್ರುವಾ ಸರ್ಜಾ ಮತ್ತು ಪ್ರೇರಣಾ ಮದ್ವೆ ಫಿಕ್ಸ್ ಆಗಿದ್ದು,  ಒಳ್ಳೇ ಹುಡುಗ ಪ್ರಥಮ್ ಈ ಜೋಡಿಯನ್ನ ಭೇಟಿಯಾಗಿ ವಿಶ್ ಮಾಡಿದ್ದಾರೆ. ಜೊತೆ ಒಂದು ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. ಏನದು ಗಿಫ್ಟ್? ಇಲ್ಲಿದೆ ನೋಡಿ. 

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಕಂಕಣ ಭಾಗ್ಯ ಕೂಡಿಬಂದಿದ್ದು, ಮುಂದಿನ ತಿಂಗಳು ಅಂದ್ರೆ ಡಿಸೆಂಬರ್ 9ರಂದು ಬಾಲ್ಯದ ಗೆಳತಿ ಪ್ರೇರಣಾ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್ ಆಗಿದೆ. 

 ಇನ್ನು ಇವರ ಮದ್ವೆ ವಿಷ್ಯಾ ಹೊರಬೀಳುತ್ತಿದ್ದಂತೆಯೇ ಮದುವೆಗೂ ಮುನ್ನವೇ ಧ್ರುವ ಸರ್ಜಾಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿವೆ. ಅದರಲ್ಲೂ ಒಳ್ಳೇ ಹುಡುಗ ಪ್ರಥಮ್, ಧ್ರುವಾ ಸರ್ಜಾ ಪ್ರೇರಣಾರನ್ನ ಭೇಟಿಯಾಗಿ ವಿಶ್ ಮಾಡಿದ್ದಾರೆ.

ಧ್ರುವ ಸರ್ಜಾ ಕೈ ಹಿಡಿಯುವ ಆ ಲಕ್ಕಿ ಗರ್ಲ್ ಯಾರು?

ಸಾಲದಕ್ಕೆ ಮದುವೆಗೂ ಮುನ್ನವೇ ಕೃಷ್ಣ ರುಕ್ಮಿಣಿಯರ ವಿಗ್ರಹವೊಂದನ್ನ ಗಿಫ್ಟ್‌ ನೀಡಿ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ಈ ಬಗ್ಗೆ ಧ್ರುವ- ಪ್ರೇರಣಾ ಜೋಡಿಯನ್ನ ಭೇಟಿಯ ಖುಷಿಯನ್ನ ತಮ್ಮ ಫೇಸ್‌ ಬುಕ್ ನಲ್ಲಿ ಹಂಚಿಕೊಂಡಿದ್ದರೆ.

ದಯಾನಂದ ಕಾಲೇಜಲ್ಲಿ ಲೆಕ್ಚರ್ ಆಗಿರೋ ಪ್ರೇರಣ ಅವ್ರು ಅದೇನ್ ಪಾಠ ಮಾಡಿರ್ತಾರೆ ಧೃವಗೆ ನೋಡೋಣ ಅಂತ ಹೋಗಿದ್ದೆ. ನಿಜಕ್ಕೂ ಅವರು ಸಖತ್ ಆಗಿದ್ದಾರೆ. ಒಳ್ಳೇ ಜೋಡಿ...made for each other ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.