ಬೆಂಗಳೂರಿನಲ್ಲಿ ನಡೆಯುವ ಮದುವೆಯ ಬಗ್ಗೆ ಸಾಮಾನ್ಯ ಜನರಿಗೂ ಮಾಹಿತಿ ದೊರೆಯಲಿ ಎನ್ನುವ ಸಲುವಾಗಿ ಯಶ್-ರಾಧಿಕ ಅಂತ ತಮ್ಮ ಮದುವೆ ಕುರಿತಂತೆ ಅಫೀಷಿಯಲ್ ಫೇಸ್'ಬುಕ್ ಪೇಜ್, ಯೂಟೂಬ್ ಚಾನಲ್ ಶುರು ಮಾಡಿದ್ದಾರೆ ಯಶ್. 

ಬೆಂಗಳೂರು(ನ.25): ಸ್ಯಾಂಡಲ್'ವುಡ್ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕ ಪಂಡಿತ್ ಮದುವೆಗೆ ಅಂತಿಮ ಸಿದ್ಧತೆಗಳು ನಡೆಯುತ್ತಿದ್ದು, ಈಗಾಗಲೇ ಅತಿಥಿಗಳನ್ನು ಮದುವೆ ಆಹ್ವಾನಿಸುವುದರಲ್ಲಿಯೇ ಯುವ ಜೋಡಿ ಬಿಝಿಯಾಗಿದೆ. 

Add Asianetnews Kannada as a Preferred SourcegooglePreferred

ಬೆಂಗಳೂರಿನಲ್ಲಿ ನಡೆಯುವ ಮದುವೆಯ ಬಗ್ಗೆ ಸಾಮಾನ್ಯ ಜನರಿಗೂ ಮಾಹಿತಿ ದೊರೆಯಲಿ ಎನ್ನುವ ಸಲುವಾಗಿ ಯಶ್-ರಾಧಿಕ ಅಂತ ತಮ್ಮ ಮದುವೆ ಕುರಿತಂತೆ ಅಫೀಷಿಯಲ್ ಫೇಸ್'ಬುಕ್ ಪೇಜ್, ಯೂಟೂಬ್ ಚಾನಲ್ ಶುರು ಮಾಡಿದ್ದಾರೆ ಯಶ್. 

ಯಶ್ ರವರ ವಿವಾಹ ಯಾವ ರೀತಿ ನಡೆಯಲಿದೆ, ಏನೆಲ್ಲಾ ವಿಶೇಷತೆಗಳಿರಲಿವೆ, ಯಾವ ಬಗೆಯ ಭಕ್ಷ್ಯ ಭೋಜನಗಳಿವೆ, ಯಾರೆಲ್ಲಾ ಅತಿಥಿಗಳು ಭಾಗವಹಿಸಲಿದ್ದಾರೆ, ಮದುವೆ ಮಂಟಪ ಹೇಗಿರಲಿದೆ, ಯಾವ ರೀತಿ ತಯಾರಿ ನಡೆದಿವೆ ಮುಂತಾದ ವಿಷಯಗಳ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿ ದೊರೆಯಲಿದೆ.