ಸಿನಿಮಾ ರಿಲೀಸ್ ದಿನವೇ ಮೊಬೈಲ್‌ನಲ್ಲಿ ನೋಡಲು ಇಲ್ಲಿದೆ ಆ್ಯಪ್!
ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗುತ್ತಿಲ್ಲ ಎಂಬುದು ಅನಾದಿ ಕಾಲದಿಂದಲೂ ಕೇಳಿಬರುತ್ತಿರುವ ಬಹು ಪುರಾತನ ಸಮಸ್ಯೆ ಮತ್ತು ಪ್ರಶ್ನೆ. ಹೊಸಬರು ಮಾಡಿದ ಹಾಗೂ ಕಡಿಮೆ ಬಜೆಟ್ ಸಿನಿಮಾಗಳನ್ನು ಹೇಗೆ ಪ್ರೇಕ್ಷಕರಿಗೆ ತಲುಪಿಸಬೇಕು ಎಂಬುದರ ಬಗ್ಗೆ ಚಿತ್ರೋದ್ಯಮ ಗಮನ ಕೊಡುತ್ತಿಲ್ಲ ಎಂಬುದು ಚಿತ್ರಮಂದಿರಗಳ ವಂಚಿತ ಸಿನಿಮಾ ನಿರ್ಮಾಪಕರುಗಳ ಅರೋಪ. ಆದರೆ, ಈ ಎಲ್ಲದರ ನಡುವೆ ಕನ್ನಡ ಸಿನಿಮಾಗಳಿಗೆ ಥಿಯೇಟರ್ಗಳ ಹೊರತಾಗಿಯೂ ಸಾಕಷ್ಟುದಾರಿಗಳು, ವೇದಿಕೆಗಳು ಹುಟ್ಟಿಕೊಳ್ಳುತ್ತಿವೆ. ಅಲ್ಲಿ ತಮ್ಮ ಪ್ರದರ್ಶನದ ತಾಕತ್ತು ತೋರಿಸುತ್ತಿವೆ. ಈ ಪೈಕಿ ಡಿಜಿಟಲ್ ಮಾರುಕಟ್ಟೆಕೂಡ ಒಂದು. ಈಗ ಕನ್ನಡ ಚಿತ್ರಗಳಿಗಾಗಿಯೇ ಒಂದು ಬಾರ್ಕೋಡ್ ಆ್ಯಪ್ ತಂದಿದ್ದಾರೆ ಒಗ್ಗರಣೆ ಡಬ್ಬಿ ಕಾರ್ಯಕ್ರಮದ ರೂವಾರಿ ಮುರಳಿ.
ಈ ಬಾರ್ಕೋಡ್ ಆ್ಯಪ್ ಮೂಲಕ ನೇರವಾಗಿ ನಿಮ್ಮ ನೆಚ್ಚಿನ ಹೊಸ ಸಿನಿಮಾಗಳನ್ನು ಬಿಡುಗಡೆ ದಿನವೇ ಮೊಬೈಲ್ಗಳಲ್ಲಿ ನೋಡಬಹುದು. ಮೊದಲು ಪ್ಲೇ ಸ್ಟೋರಿನಲ್ಲಿ ಕ್ಯೂಸ್ಟಾರ್ ಎನ್ನುವ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ. ಅದಾದ ಮೇಲೆ ಇದಕ್ಕೆ 120 ರುಪಾಯಿ ಕೊಟ್ಟು ನೋಂದಣಿ ಮಾಡಿಸಿಕೊಳ್ಳಿ. ಹಾಗೆ ಮಾಡಿಸಿಕೊಂಡ ಮೇಲೆ ನಿಮಗೊಂದು ಬಾರ್ಕೋಡ್ ಸಿಗುತ್ತದೆ. ಅದರಿಂದ ನೀವು ಸ್ಕಾ್ಯನ್ ಮಾಡಿದರೆ ಕನ್ನಡ ಚಿತ್ರಗಳನ್ನು ವೀಕ್ಷಣೆ ಮಾಡಬಹುದು. ಹಾಗಂತ ಇದು ಹಳೆಯ ಸ್ಟಾಕ್ ಸಿನಿಮಾಗಳಲ್ಲ. ಶುಕ್ರವಾರ ಚಿತ್ರಮಂದಿರಕ್ಕೆ ಬರುವ ಹೊಸ ಚಿತ್ರಗಳನ್ನೇ ಇಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಶುಕ್ರವಾರ, ಶನಿವಾರ, ಭಾನುವಾರ ಹಾಗೂ ಸೋಮವಾರ ರಾತ್ರಿ 12 ಗಂಟೆ ವರೆಗೂ ಹೊಸ ಸಿನಿಮಾಗಳು ಈ ಆ್ಯಪ್ನಲ್ಲಿ ಲಭ್ಯ ಎನ್ನುತ್ತಾರೆ ಮುರಳಿ.
ಈಗ ಒಂದು ಸಿನಿಮಾ ನೋಡಬೇಕು ಎಂದರೆ ಕನಿಷ್ಟ400ರಿಂದ 500 ರುಪಾಯಿ ವೆಚ್ಚ ಮಾಡಬೇಕು. ಅಷ್ಟೇ ವೆಚ್ಚದ, ಅಷ್ಟೇ ಹೊಸ ಸಿನಿವæäಂದು ಕೇವಲ 30 ರುಪಾಯಿಗೆ ನಮ್ಮ ಆ್ಯಪ್ನಲ್ಲಿ ಸಿಗುತ್ತದೆ. ಈ ಆ್ಯಪ್ನಲ್ಲಿ 5ಲಕ್ಷಕ್ಕೂ ಹೆಚ್ಚು ಚಂದದಾರರು ಇದ್ದಾರೆ. ಒಂದು ಚಿತ್ರದಿಂದ ಬರುವ 30 ರುಪಾಯಿನಲ್ಲಿ 15 ರುಪಾಯಿ ನಿರ್ಮಾಪಕರಿಗೆ ನೀಡಲಾಗುವುದು. ನಾಲ್ಕು ದಿನ ನಾಲ್ಕು ಶೋ ಪ್ರದರ್ಶನದ ಹಕ್ಕುಗಳನ್ನು ನಾನು ಪಡೆದುಕೊಳ್ಳುತ್ತೇನೆ. ಮೇ.1 ರಿಂದ ಈ ಹೊಸ ಆ್ಯಪ್ ಜಾರಿಯಾಗಲಿದೆ. - ಒಗ್ಗರಣೆಣಿ ಡಬ್ಬಿ ಮುರಳಿ
ಒಮ್ಮೆ ಬಾರ್ಕೋಡ್ ಸ್ಕಾ್ಯನ್ ಮಾಡಿಕೊಂಡ ಮೇಲೆ ನಾಲ್ಕು ದಿನ ಒಂದು ಚಿತ್ರವನ್ನು ಎಷ್ಟುಬಾರಿಯಾದರೂ ನೋಡಬಹುದು. ಆದರೆ, ಎಷ್ಟುಸಲವಾದರೂ ನೋಡಬಹುದಾದ ಒಂದು ಚಿತ್ರಕ್ಕೆ ಮೂವತ್ತು ರುಪಾಯಿ ನೀಡಬೇಕು. ಈ ಆ್ಯಪ್ನಲ್ಲಿ ಹೀಗೆ ತಿಂಗಳಿಗೆ ನಾಲ್ಕು ಸಿನಿಮಾಗಳನ್ನು ನೋಡಬಹುದಾಗಿದೆ. ಮುಂದಿನ ತಿಂಗಳು ಮೇ 1ರಿಂದ ಈ ಕ್ಯೂಸ್ಟಾರ್ ಆ್ಯಪ್ ಜಾರಿಗೆ ಬರಲಿದೆ. ಚಿತ್ರಮಂದಿರಕ್ಕೆ ಹೋಗಿಯೇ ಹೊಸ ಸಿನಿಮಾಗಳನ್ನು ನೋಡುವ ಬದಲು 30 ರುಪಾಯಿ ಕೊಟ್ಟರೆ ನಿಮ್ಮ ಮೊಬೈಲ್ನಲ್ಲೇ ನೋಡಬಹುದು.