ಬಿಗ್ ಬಾಸ್ ಕಂಟೆಸ್ಟಂಟ್’ಗಳಿಂದ ನಿವೇದಿತಾಗೆ ಹೊಗಳಿಕೆ ಮಹಾಪೂರಾ

First Published 12, Jan 2018, 5:02 PM IST
Niveditha Gowda gets Appreciation from contestants
Highlights

ಬಿಗ್ ಬಾಸ್ ಮನೆಯಲ್ಲಿ  ಗೊಂಬೆ ಎಂದೇ ಕರೆಸಿಕೊಳ್ಳುವ ನಿವೇದಿತಾ ಎಲ್ಲರಿಂದಲೂ ಕೂಡ ಹೊಗಳಿಕೆಯನ್ನು ಪಡೆದುಕೊಂಡಿದ್ದಾರೆ.

ಬೆಂಗಳೂರು (ಜ.12) ಬಿಗ್ ಬಾಸ್ ಮನೆಯಲ್ಲಿ  ಗೊಂಬೆ ಎಂದೇ ಕರೆಸಿಕೊಳ್ಳುವ ನಿವೇದಿತಾ ಎಲ್ಲರಿಂದಲೂ ಕೂಡ ಹೊಗಳಿಕೆಯನ್ನು ಪಡೆದುಕೊಂಡಿದ್ದಾರೆ.

ದಿವಾಕರ್ ಪತ್ನಿ ಬಿಗ್ ಬಾಸ್ ಮನೆಗೆ ಬಂದ ವೇಳೆ ಮಾತನಾಡಿದ ನಿವೇದಿತಾ ಅವರು ಮೊದಲ ವಾರಕ್ಕಿಂತಲೂ ಸಾಕಷ್ಟು ಸುಧಾರಿಸಿದ್ದಾರೆ ಎಂದು ಹೇಳಿದರು.

ಇನ್ನು ಇದೇ ವೇಳೆ ನಿವೇದತಾ ಗಾರ್ಡನ್ ಏರಿಯಾದಲ್ಲಿ ಹೆಚ್ಚು ಮಡಕೆಯನ್ನು ಬ್ಯಾಲೆನ್ಸಿಂಗ್ ಮಾಡಿದ್ದು, ದಿವಾಕರ್ ಅವರು ಪತ್ನಿಯೊಂದಿಗೆ ಹೆಚ್ಚು ಸಮಯ ಕಳೆಯಲು ಸಹಕಾರಿಯಾಯಿತು.

ಇನ್ನು ಇದೇ ವೇಳೆ ದಿವಾಕರ್ ಪತ್ನಿ ಎಲ್ಲಾ ಕಂಟೆಸ್ಟಂಟ್’ಗಳನ್ನೂ ಕೂಡ ಅವರ ಮನೆಗೆ ಆಹ್ವಾನಿಸಿದರು. ಅಲ್ಲದೇ ಆಹಾರ ಬಡಿಸಿದ ಶೃತಿ, ಅನುಪಮಾ ಅವರಿಗೆ ಮಮತಾ ಧನ್ಯವಾದ ತಿಳಿಸಿದರು. ಇನ್ನು ಇದೇ ಸಂದರ್ಭದಲ್ಲಿ ಹೆಚ್ಚು ಹೊತ್ತು ಮಡಕೆಯನ್ನು ನಿವೇದಿತಾ ಬ್ಯಾಲೆನ್ಸಿಂಗ್ ಮಾಡಿ ದಾಖಲೆ ಬರೆದರು.

loader