ಟಗರು ಚಿತ್ರದ ನಂತರ ದುನಿಯಾ ಸೂರಿ ಹಾಗೂ ಡಾಲಿ ಧನಂಜಯ ಜೋಡಿಯ 'ಪಾಪ್‌ಕಾರ್ನ್ ಮಂಕಿ ಟೈಗರ್' ಟೈಟಲ್ ಟ್ರೆಂಡ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಮೊಟ್ಟ ಮೊದಲ ಬಾರಿಗೆ ನಿರ್ದೇಶಕ ಸೂರಿ, ತಮ್ಮ ಮೊಬೈಲ್ ಕವರ್‌ಗೆ ಹೊಸ ಚಿತ್ರದ ಟೈಟಲ್ ಡಿಸೈನ್ ಹಾಕಿಕೊಂಡಿದ್ದಾರೆ. 

ಈಗ ನಟ ಶಿವರಾಜ್‌ಕುಮಾರ್,ಮೊಬೈಲ್ ಕವರ್ ಡಿಸೈನ್ ತೋರಿಸುವ ಮೂಲಕ ಟೈಟಲ್ ಟ್ರೆಂಡ್ ಆಗುವ ಸೂಚನೆ ನೀಡಿದ್ದಾರೆ. ಸಾಮಾನ್ಯವಾಗಿ ನಿರ್ದೇಶಕ ಸೂರಿ ಸಿನಿಮಾದ ಟೈಟಲ್ ಟ್ರೆಂಡ್ಆಗುವುದು ಮಾಮೂಲು. 'ಟಗರು' ಟೈಟಲ್‌ ಅಂಥದ್ದೇ ಹವಾ ಸೃಷ್ಟಿಸಿತ್ತು. ಈಗ 'ಪಾಪ್‌ಕಾರ್ನ್ ಮಂಕಿ ಟೈಗರ್' ಸರದಿ. ಕೆ ಪಿ ಶ್ರೀಕಾಂತ್ ನಿರ್ಮಾಣದ ಈ ಚಿತ್ರಕ್ಕೆ ಧನಂಜಯ ನಾಯಕ. ನಿವೇದಿತಾ ನಾಯಕಿ.