ಬಿಗ್ ಬಾಸ್ ಶೋನಲ್ಲಿ ಮೋಹನ್, ಪ್ರಥಮ್, ಕೀರ್ತಿಕುಮಾರ್, ಮಾಳವಿಕಾ ಮತ್ತು ರೇಖಾ ಅವರು ಫಿನಾಲೆ ತಲುಪಿದ್ದಾರೆ.

ಬೆಂಗಳೂರು(ಜ. 23): ಅಂತಿಮ ವಾರಕ್ಕೆ ಅಡಿ ಇಟ್ಟಿರುವ ಕನ್ನಡ ಬಿಗ್'ಬಾಸ್ ಮನೆಯಿಂದ ಶಾಲಿನಿ ಎಲಿಮಿನೇಟ್ ಆಗಿರುವ ಸುದ್ದಿ ಹೊರಬಿದ್ದಿದೆ. ಮಿಡ್'ವೀಕ್'ನಲ್ಲಿ ಶಾಲಿನಿ ಬಿಗ್ ಬಾಸ್ ಮನೆಯಿಂದ ಹೊರಬೀಳುತ್ತಿದ್ದಾರೆ. ಮಿಡ್'ವೀಕ್'ನಲ್ಲಿ ಎಲಿಮಿನೇಟ್ ಆಗಲು ಮೋಹನ್ ಹೊರತುಪಡಿಸಿ ಮಿಕ್ಕವರೆಲ್ಲರನ್ನೂ ನಾಮಿನೇಟ್ ಮಾಡಲಾಗಿತ್ತು. ಕಳೆದ ವಾರದ ಎಲಿಮಿನೇಟೆಡ್ ಸ್ಪರ್ಧಿ ಭುವನ್ ತಮ್ಮ ವಿಶೇಷಾಧಿಕಾರದ ಮೂಲಕ ಮೋಹನ್ ಅವರಿಗೆ ನೇರವಾಗಿ ಫಿನಾಲೆಗೆ ಹೋಗುವ ಅವಕಾಶ ಕೊಟ್ಟಿದ್ದರು.

ಇದೀಗ ಶಾಲಿನಿ ಎಲಿಮಿನೇಟ್ ಆಗಿರುವ ಹಿನ್ನೆಲೆಯಲ್ಲಿ, ಬಿಗ್ ಬಾಸ್ ಶೋನಲ್ಲಿ ಮೋಹನ್, ಪ್ರಥಮ್, ಕೀರ್ತಿಕುಮಾರ್, ಮಾಳವಿಕಾ ಮತ್ತು ರೇಖಾ ಅವರು ಫಿನಾಲೆ ತಲುಪಿದ್ದಾರೆ. ಭಾನುವಾರದಂದು ಬಿಗ್ ಬಾಸ್ ವಿಜೇತರನ್ನು ಘೋಷಿಸುವ ಸಾಧ್ಯತೆ ಇದೆ.