ಕನ್ನಡದ ನಂತರ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬೇಜಾನ್ ಹವಾ ಸೃಷ್ಟಿಸಿರೋ ಚಿತ್ರ ಅಜ್ಞಾತವಾಸಿ. ಪವನ್ ಕಲ್ಯಾಣ್ ಔಟ್ ಅಂಡ್ ಔಟ್ ಕ್ಲಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಅಜ್ಞಾತವಾಸಿ ಸಿನಿಮಾ ನೋಡಲು ಪವರ್ ಸ್ಟಾರ್ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ.

ಕನ್ನಡ, ತೆಲುಗು ಹಾಗು ತಮಿಳು ಸೇರಿದಂತೆ, ಸೌತ್ ನಲ್ಲಿ ಸಂಕ್ರಾತಿ ಹಬ್ಬಕ್ಕೆ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ಮೂಲಕ ಹೊಸ ವರ್ಷದ ಆರಂಭದಲ್ಲೇ ಬಿಗ್ ಸ್ಟಾರ್'ಗಳ ಮಧ್ಯೆ, ಸಿನಿಮಾ ಸ್ಟಾರ್ ವಾರ್ ಶುರುವಾಗುತ್ತಿದೆ. ಸದ್ಯಕ್ಕೆ ಟ್ರೈಲರ್ ನಿಂದಲೇ ಸ್ಯಾಂಡಲ್ ವುಡ್ ನಲ್ಲಿ ಧೂಳ್ ಎಬ್ಬಿಸಿರೋ ಸಿನಿಮಾ ರಾಜು ಕನ್ನಡ ಮೀಡಿಯಂ.

ಫಸ್ಟ್ ರಾಂಕ್ ಖ್ಯಾತಿಯ ಗುರುನಂದನ್ ಆಕ್ಟ್ ಮಾಡಿರುವ ರಾಜು ಕನ್ನಡ ಮೀಡಿಯಂ ಸಿನಿಮಾ, ಗಾಂಧಿನಗರದಲ್ಲಿ ಒಂದಲ್ಲ ಒಂದು ವಿಷ್ಯಕ್ಕೆ ಸೌಂಡ್ ಮಾಡಿರೋ ಚಿತ್ರ. ಲವ್ ಸ್ಟೋರಿ ಕಥೆ ಆಧರಿಸಿರೋ ರಾಜು ಕನ್ನಡ ಮೀಡಿಯಂ ಚಿತ್ರದ ಮೇಜರ್ ಹೈಲೆಟ್ಸ್ ಅಂದ್ರೆ, ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಕೋಟ್ಯಾಧಿಪತಿ ಪಾತ್ರದಲ್ಲಿ ಕಾಣಿಸಿಕೊಂಡು, ರಾಜುವಿಗೆ ಸಾಥ್ ನೀಡಿದ್ದಾರೆ.

ಕೆ ಎ ಸುರೇಶ್ ನಿರ್ಮಾಣದ ರಾಜು ಕನ್ನಡ ಮೀಡಿಯಂ ಸಿನಿಮಾ, ಸಂಕ್ರಾತಿ ಹಬ್ಬದ ಟೈಮಲ್ಲಿ ತೆರೆ ಕಾಣುತ್ತಿದೆ..ಹೀಗಾಗಿ ಈ ಚಿತ್ರದ ಮೇಲೆ ಸಾಕಷ್ಟು ನೀರಿಕ್ಷೆ ಇದೆ.

ಕನ್ನಡದ ನಂತರ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬೇಜಾನ್ ಹವಾ ಸೃಷ್ಟಿಸಿರೋ ಚಿತ್ರ ಅಜ್ಞಾತವಾಸಿ. ಪವನ್ ಕಲ್ಯಾಣ್ ಔಟ್ ಅಂಡ್ ಔಟ್ ಕ್ಲಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಅಜ್ಞಾತವಾಸಿ ಸಿನಿಮಾ ನೋಡಲು ಪವರ್ ಸ್ಟಾರ್ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಟೀಸರ್'ನಿಂದಲೇ ಯೂ ಟ್ಯೂಬ್'ನಲ್ಲಿ ಟ್ರೆಂಡಿಂಗ್ ನಲ್ಲಿರುವ ಅಜ್ಞಾತವಾಸಿ, ತೆಲುಗು ಚಿತ್ರರಂಗದಲ್ಲಿ ರಿಲೀಸ್ ಆಗ್ತಾ ಇರೋ ಮೊಟ್ಟ ಮೊದಲ ಸ್ಟಾರ್ ಸಿನಿಮಾವಾಗಿದೆ.

ಪವರ್ ಸ್ಟಾರ್ ಐಟಿ ಉದ್ಯೋಗಿಯಾಗಿ ಕಾಣಿಸಿಕೊಂಡಿರುವ ಅಜ್ಞಾತವಾಸಿ ಚಿತ್ರದಲ್ಲಿ, ಫ್ಯಾಮಿಲಿ ಸೆಂಟಿಮೆಂಟ್ ಜೊತೆಗೆ ಭರ್ಜರಿ ಆಕ್ಷನ್ ಇದೆ..ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಅಜ್ಞಾತವಾಸಿ ಸಿನಿಮಾ, ಸಂಕ್ರಾತಿ ಹಬ್ಬಕ್ಕೆ ಐದು ದಿನ ಮುಂಚಿತವಾಗಿ ವರ್ಲ್ಡ್​ ವೈಡ್ ತೆರೆ ಕಾಣುತ್ತಿದೆ.

ಟಾಲಿವುಡ್ ನಂತರ ಕಾಲಿವುಡ್'ನಲ್ಲಿ ಪೊಂಗಲ್'ಗೆ ರಿಲೀಸ್ ಆಗ್ತಾ ಇರೋ ಸ್ಟಾರ್ ಸಿನಿಮಾ ಅಂದರೆ ಥಾನಾ ಸೆರ್ಂಧ ಕೂಟ್ಟಂ..ಸೂರ್ಯ ಸಿ ಬಿಐ ಆಫೀಸರ್ ಆಗಿ ಸಿಲ್ವರ್ ಸ್ಕ್ರೀನ್ ಮೇಲೆ ಆರ್ಭಟಿಸಲಿದ್ದಾರೆ. ಮಾಸ್ ಡೈಲಾಗ್ ಜೊತೆಗೆ ಆಕ್ಷನ್ ಧಮಾಕ ಸೂರ್ಯನ ಪ್ಯಾನ್ಸ್ ಗೆ ಕಿಕ್ ಕೊಡುತ್ತೆ.

ಇನ್ನು ಫಸ್ಟ್ ಟೈಮ್ ಸೌತ್ ಬ್ಯೂಟಿ ಕೀರ್ತಿ ಸುರೇಶ್ ಸೂರ್ಯನ ಜೊತೆ ರೊಮ್ಯಾನ್ಸ್ ಮಾಡಿದ್ದು, ರಮ್ಯಾಕೃಷ್ಣ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿ ಚಿತ್ರ ಸ್ಪೆಷಲ್ ಚಬ್ಬೀಸ್ ಚಿತ್ರದ ರಿಮೇಕ್ ಆಗಿದ್ದು, ವಿಘ್ನೇಶ್ ಶಿವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಮರ್ಷಿಯಲ್ ಎಲಿಮೆಟ್ಸ್ ಗಳನ್ನ ಹೊಂದಿರುವ ಥಾನಾ ಸೆರ್ಂಧ ಕೂಟ್ಟಂ ಚಿತ್ರ ಪೊಂಗಲ್ ಗೆ ಪ್ರೇಕ್ಷಕರಿಗೆ ದರ್ಶನ ಕೊಡಲಿದೆ. ಹೀಗಾಗಿ ಈ ಮೂರು ಜನ ಸ್ಟಾರ್ ನಟರ ಮಧ್ಯೆ ಬಿಗ್ ಸ್ಟಾರ್ ಆಗೋದು ಗ್ಯಾರಂಟಿ.