ಚೆನ್ನೈ[ನ.24]: ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌ ರಜನೀಕಾಂತ್‌ ಹಾಗೂ ಬಾಲಿವುಡ್‌ನ ಆ್ಯಕ್ಷನ್‌ ಹೀರೋ ಅಕ್ಷಯ್‌ ಕುಮಾರ್‌ ಅಭಿನಯದ ವೈಜ್ಞಾನಿಕವಾದ 2.0 ಚಿತ್ರವು ನ.29ಕ್ಕೆ ವಿಶ್ವಾದ್ಯಂತ 10000 ಪರದೆಗಳಲ್ಲಿ ಬಿಡುಗಡೆಯಾಗುತ್ತದೆ.

ಇದನ್ನೂ ಓದಿ: ರಜನಿಕಾಂತ್‌ರ 2.0 ಚಿತ್ರದ ಫೋಟೋಗಳಿವು....

ಶಂಕರ್‌ ನಿರ್ದೇಶನದ, ಈ ಕನಸಿನ ಚಿತ್ರಕ್ಕೆ ಲೈಕಾ ಪ್ರೊಡಕ್ಷನ್ಸ್‌ ಸಂಸ್ಥೆ 600 ಕೋಟಿ ರು. ವೆಚ್ಚ ಮಾಡಿದೆ ಎಂಬ ಸುದ್ದಿ ವ್ಯಾಪಕವಾಗಿ ಹಬ್ಬಿದೆ. ಈ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿರುವ ಶಂಕರ್‌, ‘ಕೇವಲ ಸಿನಿಮಾ ನಿರ್ಮಾಣಕ್ಕಾಗಿಯೇ 400-450 ಕೋಟಿ ರು. ವೆಚ್ಚವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: 600 ಕೋಟಿ ವೆಚ್ಚದ ರಜನಿ ಹೊಸ ಸಿನಿಮಾ ರೆಡಿ

ಚಿತ್ರದ ಪ್ರಚಾರ ಮತ್ತು ಪ್ರೊಡಕ್ಷನ್‌ಗಾಗಿಯೂ ನಿರ್ಮಾಣ ಸಂಸ್ಥೆ ಹಣವನ್ನು ನೀರಿನಂತೆ ಖರ್ಚು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.