ನಾತಿ ಚರಾಮಿ ಖ್ಯಾತಿಯ ಶೃತಿ ಹರಹರನ್  ಕೆಲ ದಿನಗಳ ಹಿಂದೆ ಹೆಣ್ಣು ಮಗಳಿಗೆ ಜನ್ಮ ನೀಡಿದ್ದಾರೆ. ಇದುವರೆಗೂ ಮುದ್ದು ಮಗಳ ಫೋಟೋವನ್ನು ಎಲ್ಲಿಯೂ ರಿವೀಲ್ ಮಾಡಿರದ ಶೃತಿ ಹರಿಹರನ್ ಮೊದಲ ಬಾರಿಗೆ ಪಾಪುವಿನ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. 

 

ವಿಡಿಯೋದಲ್ಲಿ ಪಾಪುವಿನ ಕಾಲು ಮಾತ್ರ ಕಾಣುತ್ತವೆ. ‘ಎರಡು ತಿಂಗಳು ಹೇಗೆ ಕಳೆದವೋ ಗೊತ್ತೇ ಆಗುತ್ತಿಲ್ಲ’ ಎಂದು ಹೇಳಿಕೊಂಡಿದ್ದಾರೆ. 

ಬ್ಯೂಟಿಫುಲ್ ಮನಸಿನ ಹುಡುಗಿ’ ಯ ಬ್ಯೂಟಿಫುಲ್ ಸೀರೆ ಫೋಟೋಗಳು!

ಶೃತಿ ಹರಿಹರನ್ ಸದ್ಯ ಸಿನಿಮಾಗಳಿಂದ ದೂರವಿದ್ದು ಮಗಳ ಲಾಲನೆ, ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಪ್ರಕಟವಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2018 ರಲ್ಲಿ ನಾತಿಚರಾಮಿ ಚಿತ್ರಕ್ಕಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿ ಪಡೆದಿದ್ದರು. ಜೊತೆಗೆ ನಾತಿಚರಾಮಿ ಚಿತ್ರಕ್ಕೂ ಉತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ. 

66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಯಾರ್ಯಾರಿಗೆ ಪ್ರಶಸ್ತಿ ಗರಿ? ಇಲ್ಲಿದೆ ನೋಡ!

ಶೃತಿ ಹರಿಹರನ್, ಅರ್ಜುನ್ ಸರ್ಜಾ ಮೇಲೆ ಮಾಡಿರುವ Me Too ಆರೋಪ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸಂಚಲನವನ್ನು ಮೂಡಿಸಿತ್ತು. ಶೃತಿ ಹರಿಹರನ್, ಅರ್ಜುನ್ ಸರ್ಜಾ ಜೊತೆ ಸೇರಿ ‘ವಿಸ್ಮಯ’ ಸಿನಿಮಾ ಮಾಡಿದ್ದರು. ಈ ಸಿನಿಮಾದಲ್ಲಿ ರೊಮ್ಯಾಂಟಿಕ್ ಸೀನ್ ಗಳಿದ್ದು  ಆ ಸೀನ್ ಗಳಲ್ಲಿ ನಟಿಸುವಾಗ ಅರ್ಜುನ್ ಸರ್ಜಾ ಅನುಚಿತವಾಗಿ ವರ್ತಿಸಿದ್ದರು ಎಂದು ಶೃತಿ ಆರೋಪಿಸಿದ್ದರು. ಇದು ಸಂಚಲನವನ್ನೇ ಹುಟ್ಟು ಹಾಕಿತ್ತು. ಮೀ ಟೂ ವಿವಾದದ ನಂತರ ಶೃತಿ ಹರಿಹರನ್ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿರಲಿಲ್ಲ. ಆ ನಂತರ ಪ್ರಗ್ನೆನ್ಸಿ, ಈಗ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.