Published : Mar 09 2017, 08:05 AM IST| Updated : Apr 11 2018, 12:47 PM IST
Share this Article
FB
TW
Linkdin
Whatsapp
ಹೌದು , ‘ನಾನು ನೆಮ್ಮದಿಯಾಗಿ ನಿದ್ದೆ ಮಾಡಿಲ್ಲ, ಶೂಟಿಂಗು ಶೂಟಿಂಗು ಅಂತ ಓಡಾಡ್ತಿದೀನಿ. ಮೊದಲೆಲ್ಲಾ 12 ಗಂಟೆ ನಿದ್ದೆ ಮಾಡ್ತಿದ್ದೆ. ಈಗ ನಿದ್ದೆ ಮಾಡೋದಕ್ಕೇ ಟೈಮಿಲ್ಲ. ಬೆಳಿಗಿನ ಜಾವ ಬಂದು, ಒಂದೆರಡು ಗಂಟೆ ಮಲಗಿ ಶೂಟಿಂಗ್‌ಗೋಸ್ಕರ ಎದ್ದೇಳ್ತಿದ್ದೀನಿ' ಅಂತಾರೆ ಪ್ರಥಮ್‌.
‘ಬಿಗ್ಬಾಸ್' ಮುಗಿಸಿಕೊಂಡು ಬಂದ ಮೇಲೆ ಪ್ರಥಮ್ ಏನು ಮಾಡುತ್ತಿದ್ದಾರೆ? ನಿದ್ದೆ ಮಾಡುತ್ತಿಲ್ಲ!
ಮತ್ತೇನು ಮಾಡುತ್ತಿದ್ದಾರೆ? ಚಿತ್ರಗಳ ಮೇಲೆ ಚಿತ್ರಗಳನ್ನ ಒಪ್ಪಿಕೊಳ್ಳುತ್ತಿದ್ದಾರೆ.
ಎಷ್ಟುಸಿನಿಮಾಗಳನ್ನ ಒಪ್ಪಿಕೊಂಡಿದ್ದಾರೆ? ಆರು ಚಿತ್ರಗಳನ್ನ! ಅಲ್ಲಿಗೆ ಅವರು ಸರಿ ಸುಮಾರು ಒಂದೂವರೆ ವರ್ಷಕ್ಕೆ ಬುಕ್ ಆಗಿದ್ದಾರೆ.
ಹೌದು, ‘ನಾನು ನೆಮ್ಮದಿಯಾಗಿ ನಿದ್ದೆ ಮಾಡಿಲ್ಲ, ಶೂಟಿಂಗು ಶೂಟಿಂಗು ಅಂತ ಓಡಾಡ್ತಿದೀನಿ. ಮೊದಲೆಲ್ಲಾ 12 ಗಂಟೆ ನಿದ್ದೆ ಮಾಡ್ತಿದ್ದೆ. ಈಗ ನಿದ್ದೆ ಮಾಡೋದಕ್ಕೇ ಟೈಮಿಲ್ಲ. ಬೆಳಿಗಿನ ಜಾವ ಬಂದು, ಒಂದೆರಡು ಗಂಟೆ ಮಲಗಿ ಶೂಟಿಂಗ್ಗೋಸ್ಕರ ಎದ್ದೇಳ್ತಿದ್ದೀನಿ' ಅಂತಾರೆ ಪ್ರಥಮ್.
ಅಂದಹಾಗೆ ಅವರು ಸದ್ಯ ‘ಫಸ್ಟ್ ರಾರಯಂಕ್ ರಾಜು' ನರೇಂದ್ರ ನಿರ್ದೇಶನದ ಎರಡನೇ ಚಿತ್ರ ‘ರಾಜು ಕನ್ನಡ ಮೀಡಿಯಂ'ನಲ್ಲಿ ಒಂದು ಸ್ಪೆಷಲ್ ಸಾಂಗ್ನಲ್ಲಿ ಬಂದು ಹೋಗುತ್ತಿದ್ದಾರೆ. ಬೆಂಗಳೂರಿಗೆ ಬಂದ ಕನ್ನಡಿಗನ ಪಡಿಪಾಟಲನ್ನು ತಮಾಷೆಯಾಗಿ ಹೇಳುವ ಹಾಡು ಅದಾಗಿದ್ದು ಯುಬಿಸಿಟಿ, ಸುವರ್ಣ ನ್ಯೂಸ್ಗಳಲ್ಲಿ ಚಿತ್ರೀಕರಣ ನಡೆದಿದೆ.
6 ಸಿನಿಮಾಗಳಿಗೆ ಬುಕ್
ಪ್ರಥಮ್ ಆರು ಚಿತ್ರಗಳನ್ನು ಹೆಚ್ಚುಕಮ್ಮಿ ಒಪ್ಪಿಕೊಂಡಿರುವುದಾಗಿ ಹೇಳುತ್ತಾರೆ. ಅದರಲ್ಲಿ ಮೊದಲು ಬಿಡುಗಡೆ ಆಗಬಹುದಾದ ಸಿನಿಮಾ ಅಂದರೆ ಚಮಕ್. ಅನಂತರ ‘ಕಾಯಾವಾಚಾ' ಚಿತ್ರವಿದೆ. ಅದಲ್ಲದೇ ‘ಲಾರ್ಡ್' ಮತ್ತು ‘ವಿನ್ನರ್' ಅನ್ನುವ ಚಿತ್ರ ಸೆಟ್ಟೇರಲಿದೆ. ಅದಲ್ಲದೇ ಎಸ್ ನಾರಾಯಣ್ ಅವರ ಜೊತೆಗೆ ಮಾತುಕತೆ ಆಗಿದೆ. ಅವರಿಗೊಂದು ವಿಭಿನ್ನ ಚಿತ್ರವನ್ನು ಎಸ್ ನಾರಾಯಣ್ ಅವರು ಸಿದ್ಧ ಮಾಡುತ್ತಿದ್ದಾರಂತೆ. ಹಾಗೇ ನಾಗತಿಹಳ್ಳಿ ಚಂದ್ರಶೇಖರ್ ಅವರ ಹೊಸ ಚಿತ್ರಕ್ಕೂ ಪ್ರಥಮ್ ಆಯ್ಕೆಯಾಗಿದ್ದಾರೆ. ವಿಜ್ಞಾನ ವಿಸ್ಮಯದ ಕತೆಯನ್ನಾಧರಿಸಿದ ಈ ಚಿತ್ರವನ್ನು ಪ್ರಥಮ್ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಇದರ ನಡುವೆ ಇನ್ನೊಂದು ಚಿತ್ರವನ್ನು ‘ಸಿಂಪಲ್' ಸುನಿ ನಿರ್ದೇಶಿಸುತ್ತಿದ್ದಾರಂತೆ, ಆ ಚಿತ್ರವನ್ನು ಖ್ಯಾತ ನಿರ್ಮಾಪಕ ಕೆಪಿ ಶ್ರೀಕಾಂತ್ ನಿರ್ಮಿಸಲಿದ್ದಾರೆ.
ಟಿವಿಗೆ ಜೈ
ಪ್ರಥಮ್ ಅವರಿಗೆ ಅತಿ ಹೆಚ್ಚು ಮೆಚ್ಚುಗೆಯನ್ನು ತಂದುಕೊಟ್ಟ‘ಬಿಗ್ಬಾಸ್' ಕಾರ್ಯಕ್ರಮಕ್ಕೆ ಋುಣಿಯಾಗಿದ್ದೇನೆ ಅಂತಾರೆ ಪ್ರಥಮ್. ಹಾಗಾಗಿ ಅವರು ಕಿರುತೆರೆಯನ್ನಂತೂ ಬಿಟ್ಟಿಲ್ಲ. ಅವರು ಕಲರ್ಸ್ ಕನ್ನಡದಲ್ಲಿ 2 ಶೋಗಳನ್ನು ಸದ್ಯದಲ್ಲೇ ಶುರು ಮಾಡಲಿದ್ದಾರಂತೆ. ಒಂದು ಅವರ ಟಾಕ್ ಶೋ ಆಗಿರುತ್ತದೆ, ಇನ್ನೊಂದು ಪ್ರಥಮ್ ವ್ಯಕ್ತಿತ್ವಕ್ಕೆ ಹೊಂದುವಂಥ ವಿಭಿನ್ನ ಶೋ. ಅದಕ್ಕೆ ಬೇಕಾಗಿ ಅವರ ಗೆಟಪ್ ಕೂಡ ಕೊಂಚ ಬದಲಾಗಬೇಕಾಗಿದೆ.
ಅಭಿಮಾನಿಗಳು
ಅಭಿಮಾನಿಗಳಿಂದ ಲಾರ್ಡ್ ಪ್ರಥಮ್ ಸರ್ ಅಂತಲೇ ಪ್ರೀತಿಯಿಂದ ಕರೆಸಿಕೊಳ್ಳುವ ಪ್ರಥಮ್, ಮೊದಲು ತಾವೇ ಹೋಗಿ ಆಟೋಗ್ರಾಫ್ ಹಾಕಿಸಿಕೊಳ್ಳಲು ಸ್ಟಾರ್ಗಳ ಮುಂದೆ ನಿಲ್ಲುತ್ತಿದ್ದರು. ಆದರೆ ಈಗ ಅವರಿಗೇ ಅಭಿಮಾನಿಗಳ ಸಂಖ್ಯೆ ವಿಪರೀತ ಜಾಸ್ತಿ ಆಗಿದೆಯಂತೆ. ಕೆಲವರು ಬೈಗುಳದ ಅಭಿಷೇಕ ಮಾಡುತ್ತಾ, ಫೋಟೋ ತೆಗೆಸಿಕೊಳ್ಳುತ್ತಾರೆ, ಕೆಲವರು ಪ್ರೀತಿಯಿಂಜ ತಬ್ಬಿಕೊಳ್ಳುತ್ತಾರೆ, ಕೆಲವರು ಮುದ್ದಾಡುತ್ತಾರೆ. ಒಟ್ಟಿನಲ್ಲಿ ಯಶಸ್ಸಿನ ಮಳೆಯಲ್ಲಿ ಅವರು ಮುಳುಗೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.