ವಯಸ್ಸಿನ ಮಿತಿಯಿಲ್ಲದೇ ಪ್ರತೀ ಸೀಸನ್‌ಗೂ ಒಬ್ಬೊಬ್ಬ ಪ್ರತಿಭಾವಂತರನ್ನು ಗಾಯನ ಲೋಕಕ್ಕೆ ಪರಿಚಯಿಸುತ್ತಿರುವುದು ಸರಿಗಮಪ ರಿಯಾಲಿಟಿ ಶೋ.

ಹಾಡಲು ಇಷ್ಟವಿದ್ದು ಯಾವುದೇ ರೀತಿಯ ತರಬೇತಿ ಪಡೆಯದೇ ವೇದಿಕೆಯಲ್ಲಿ ಒಳ್ಳೆಯ ಪರ್ಫಾಮೆನ್ಸ್ ನೀಡಿದ ಸ್ಪರ್ಧಿ ಲಕ್ಷ್ಮೀ. ಸೀಸನ್- 14 ನಲ್ಲಿ ಸ್ಪರ್ಧಿಸಿದ ಲಕ್ಷ್ಮೀ ಫಿನಾಲೆ ತಲುಪದಿದ್ದರೂ ಸಾಕಷ್ಟು ಜನರ ಮನಸ್ಸು ಗೆದ್ದು 250 ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ್ದಾರೆ.

ತಮಿಳು ‘ಸರಿಗಮಪಗೆ’ ಕನ್ನಡದ ಗಾಯಕಿ ಆಯ್ಕೆ

ಈ ಬಾರಿ ಸರಗಮಪ ಸಂಚಿಕೆಯಲ್ಲಿ ಹಳೆಯ ಸ್ಪರ್ಧಿ ಹಾಗೂ ಈಗಿನ ಸ್ಪರ್ಧಿ ಜೊತೆಯಾಗಿ ಜುಗಲ್ ಬಂದಿ ಇದ್ದು ಮೋನಮ್ಮ ಹಾಗೂ ಲಕ್ಷ್ಮಿ ಜೋಡಿಯಾಗಿದ್ದರು.

ಸಂಗೀತದಲ್ಲಿ ಅಪಾರ ಆಸಕ್ತಿಯಿರುವ ಲಕ್ಷ್ಮಿಗೆ ಉಚಿತ ಸಂಗೀತಾಭ್ಯಾಸ ನೀಡುವುದಾಗಿ ಹಂಸಲೇಖ ಹೇಳಿಕೊಂಡಿದ್ದಾರೆ. ಹಾಗೂ ಆಕೆಗೆ ಬ್ಯಾಚುಲರ್ ಆಫ್ ಮ್ಯೂಸಿಕ್‌ ಮತ್ತು ಮಾಸ್ಟರ್ ಆಫ್ ಮ್ಯೂಸಿಕ್ ಕೋರ್ಸ್‌ ಉಚಿತವಾಗಿ ಹೇಳಿಕೊಡುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ವಿದ್ಯಾಭ್ಯಾಸದ ನಂತರ 25 ಸಾವಿರ ಸಂಬಳವಿರುವ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಕುರಿಗಾಹಿಯನ್ನು ನಾಯಕ ಮಾಡೋಕೆ ಬಂದ ಇಸ್ರೇಲ್ ನಿರ್ಮಾಪಕ!