ಬಹು ನಿರೀಕ್ಷಿತ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ ಜೋಗಿ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರ ಬಿಡುಗಡೆಗೆ ದಿನಾಂಲಕ ನಿಕ್ಕಿಯಾಗಿದೆ. ಈ ಬಗ್ಗೆ ಸ್ವತಃ ನಿರ್ದೇಶಕ ಪ್ರೇಮ್ ಟ್ವೀಟರ್ ನಲ್ಲಿ ವಿವರಣೆ ನೀಡಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಶಿವರಾಜಕುಮಾರ್ ಮತ್ತು ಸುದೀಪ್ ಅಭಿನಯದ 'ದಿ ವಿಲನ್' ಚಿತ್ರದ ಬಿಡುಗಡೆ ಇಷ್ಟರಲ್ಲಾಗಲೇ ಬಿಡುಗಡೆಯಾಗಿ ಜನರಿಗೆ ರಂಜನೆ ನೀಡಬೇಕಿತ್ತು. ಚಿತ್ರದ ಸೆನ್ಸಾರ್ ಆಗಿ, ಗಣಪತಿ ಹಬ್ಬದಂದು ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವುದಾಗಿ ನಿರ್ದೇಶಕ ಪ್ರೇಮ್ ಮೊದಲೆ ಹೇಳೊಕೊಂಡಿದ್ದರು. ಇದೀಗ ಗೌರಿ ಹಬ್ಬದಂದೆ ದಿನಾಂಕ ಬಹಿರಂಗ ಮಾಡಿದ್ದಾರೆ.
ಅಕ್ಟೋಬರ್ 18ಕ್ಕೆ 'ದಿ ವಿಲನ್' ಚಿತ್ರ ತೆರೆಗೆ ಅಪ್ಪಳಿಸಲಿದೆ. ಸಿನಿಮಾ ಕರ್ನಾಟಕ ಮತ್ತು ಭಾರತದಲ್ಲಷ್ಟೇ ಅಲ್ಲ, ಜಗತ್ತಿನಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಶೂಟಿಂಗ್ ಕಾಲದಿಂದಲೂ ಸಸ್ಪೆನ್ಸ್ ಕಾಪಾಡಿಕೊಂಡು ಬಂದಿರುವ ಪ್ರೇಮ್ ಕತಾ ಹಂದರವನ್ನು ಬಿಟ್ಟುಕೊಟ್ಟಿಲ್ಲ.
'ದಿ ವಿಲನ್' ಸಿನಿಮಾವನ್ನು ಪ್ರೇಮ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಸಿ.ಆರ್. ಮನೋಹರ್ ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತವಿದೆ. ಶಿವರಾಜ್ ಕುಮಾರ್, ಸುದೀಪ್, ಆ್ಯಮಿ ಜಾಕ್ಸನ್, ಮಿಥುನ್ ಚಕ್ರವರ್ತಿ, ಶ್ರೀಕಾಂತ್, ತಿಲಕ್ ತಾರಾಗಣವಿದೆ.
ವಿಲನ್ ಬಗ್ಗೆ ಮತ್ತೊಂದಿಷ್ಟು ಮಾಹಿತಿ
