ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿ ಹೆಸರು ಮಾಡಿದ್ದ ಸ್ಪರ್ಧಿಯೊಬ್ಬರು ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಘೋರ ದುರಂತ ಕಲಾವಿದನನ್ನು ಬಲಿಪಡೆದಿದೆ.

ನವದೆಹಲಿ[ಡಿ.20] ಎಂಟಿವಿಯ ಪ್ರಖ್ಯಾತ ರಿಯಾಲಿಟಿ ಶೋ ಏಸ್ ಆಫ್ ಸ್ಪೇಸ್‌ನಲ್ಲಿ ಭಾಗವಹಿಸಿ ಮನ್ನಣೆ ಗಳಿಸಿದ್ದ ಡನೀಶ್ ಜೆಹೇನ್ ಕೆಲವೇ ದಿನಗಳ ಹಿಂದೆ ಶೋದಿಂದ ಹೊರಬಿದ್ದಿದ್ದರು. ಆದರೆ ಇದೀಗ ಪ್ರಪಂಚವನ್ನೇ ತೊರೆದಿದ್ದಾರೆ.

ಮದುವೆಯೊಂದಕ್ಕೆ ತೆರಳಿದ್ದ ಡನೀಶ್ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಫಘಾತಕ್ಕೆ ತುತ್ತಾಗಿದ್ದಾರೆ. ರಿಯಾಲಿಟಿ ಶೋ ನಡೆಸಿಕೊಡುತ್ತಿರುವ ವಿಕಾಸ್‌ ಗುಪ್ತ ಡನೀಶ್ ನಿಧನದ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ರಾಕೇಶ್‌ಗೆ ಅಕ್ಷತಾ ಏಟು...ರಶ್ಮಿಗೆ ಯೂಸ್‌ಲೆಸ್‌.. ಫ್ಯಾಷನ್ ಝಲಕ್

ಏಸ್‌ ಆಫ್ ಸ್ಪೇಸ್ ರಿಯಾಲಿಟಿ ಶೋ ಬಿಗ್ ಬಾಸ್‌ನಂತೆಯೇ ಇರುತ್ತದೆ . ಎಂಟಿವಿಯಲ್ಲಿ ಮೊಟ್ಟ ಮೊದಲ ಆವೃತ್ತಿ ಪ್ರಸಾರವಾಗುತ್ತಿದೆ.

View post on Instagram