ಮಾಡೆಲ್ ಕಮ್ ನಟಿ ಲೀಸಾ ರೇ ನಟನೆಗಿಂತಲೂ ಹೆಚ್ಚು ಕ್ಯಾನ್ಸರ್ ಗೆದ್ದ ನಟಿಯಾಗಿಯೇ ಪ್ರಖ್ಯಾತರಾದವರು. ಅವರೀಗ ಸಾಮಾಜಿಕ ಜಾಲತಾಣದಲ್ಲಿ ನೋ ಮೇಕಪ್ ಫೇಸ್ ಲುಕ್ ಶೇರ್ ಮಾಡಿಕೊಂಡಿದ್ದು ನೆಟ್ಟಿಗರು ಅದನ್ನು ಸ್ವೀಕರಿಸುವ ರೀತಿಯೇ ವಿಭಿನ್ನವಾಗಿದೆ...

ಅವಳಿ ಮಕ್ಕಳ ಮಮ್ಮಿ, ಸೂಪರ್ ಮಾಡೆಲ್ ಕಮ್ ನಟಿ ಲೀಸಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನೋ ಮೇಕಪ್ ಸೆಲ್ಫೀ ಫೋಟೋಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಕ್ಯಾನ್ಸರ್ ಗೆದ್ದ ಲೀಸಾಗೆ ಅವಳಿ ಹೆಣ್ಣು ಮಕ್ಕಳು

47 ಆದರೂ 17ರಂತೆ ಕಾಣುವ ಲೀಸಾ ರೇ ‘47ರ ನಾನು, ಯಾವುದೇ ಫಿಲ್ಟರ್ ಇಲ್ಲದೇ ಫುಲ್ ಫ್ರೀ. ಇಂಥ ಮುಖ ಜನರಿಗೆ ತೋರಿಸುವ ಧೈರ್ಯ ಇದೆಯಾ? ಚಿಕ್ಕವಳಿದ್ದಾಗ ನನಗೆ ಈ ಧೈರ್ಯ ಇರಲಿಲ್ಲ. ನಿಮ್ಮ ಬೆಲೆ ಬಗ್ಗೆ ನಿಮಗೆ ಮಾತ್ರ ಗೊತ್ತು ನಿಮ್ಮ ತ್ವಚೆಯನ್ನು ಪ್ರೀತಿಸಿ. ಅದೂ ಒಂದು ಕಥೆ ಹೇಳುತ್ತದೆ- know your worth woman. ಜಗತ್ತು ನಿಮ್ಮ ಪ್ರಕಾಶವನ್ನು ಪ್ರತಿಬಿಂಬಿಸುತ್ತದೆ... ’ ಎಂದು ಬರೆದುಕೊಂಡಿದ್ದಾರೆ.

 

ಬಾಲಿವುಡ್ ಮೇನಿಯಾದಲ್ಲಿ ಬ್ಯೂಟಿ ಬಗ್ಗೆ ಹೊಸ ಅಲೆ ಹುಟ್ಟಿಸಿದ ಫೋಟೋ ಇದಾಗಿದ್ದು ಅಭಿಮಾನಿಗಳು- ನೀವು ಎಂದೆಂದೂ ಸುಂದರಿ, ಮಮ್ಮಿ ಎಂದು ಹೇಳಲು ಆಗುವುದಿಲ್ಲ ಸೋ ಎಂಗ್, ನಿಮ್ಮ ವಯಸ್ಸು ಹಾಗೂ ಬ್ಯೂಟಿ ಸಂಬಂಧವಿಲ್ಲ ಎಂದೆಲ್ಲಾ ಪಾಸಿಟಿವ್ ಕಾಮೆಂಟ್ ಮಾಡಿದ್ದಾರೆ. ಲೀಸಾ ಕ್ಯಾನ್ಸರ್ ಗೆದ್ದು ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳಿಗೆ ತಾಯಿಯಾಗಿದ್ದು ಮಕ್ಕಳಿಗೆ ಸುಫಿ ಮತ್ತು ಸೊಲೈಲ್ ಎಂದು ನಾಮಕರಣ ಮಾಡಿದ್ದಾರೆ.