ಕ್ಯಾನ್ಸರ್ ಗೆದ್ದು ಸುದ್ದಿಯಾಗಿದ್ದರು ನಟಿ, ಮಾಡೆಲ್ ಲೀಸಾ ರೇ. ಇದೀಗ ಬಾಡಿಗೆ ತಾಯಿಯ ಮೂಲಕ ಅವಳಿ ಹೆಣ್ಣು ಮಕ್ಕಳನ್ನು ಪಡೆದಿದ್ದು, ತಾಯ್ತನದ ಬಗ್ಗೆ ಈಕೆ ಹೇಳಿ ಕೊಂಡಿದ್ದೇನು?
ಯಾವ ಹೆಣ್ಣಿಗೆ ತಾನೆ ತಾಯಿಯಾಗೋ ಬಯಕೆ ಇರೋಲ್ಲ ಹೇಳಿ? ಅದರಲ್ಲಿಯೂ ಮುದ್ದಾದ, ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡುವುದು ಪ್ರತಿಯೊಂದೂ ಹೆಣ್ಣಿನ ಆಶಯ, ಕನಸು. ಅದರಲ್ಲಿಯೂ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹೆಣ್ಣಿಗಂತೂ, ಆರೋಗ್ಯವಂತ ಮಗುವಿಗೆ ಜನ್ಮ ನೀಡುವುದು ಎಂದರೆ ಸವಾಲೇ ಸರಿ.
ಆದರೆ, ಕ್ಯಾನ್ಸರ್ ಗೆದ್ದ ನಟಿ, ಮಾಡೆಲ್ ಲೀಸಾ ರೇ ಆರೋಗ್ಯವಂತ, ಮುದ್ದಾದ ಅವಳಿ ಹೆಣ್ಣು ಮಕ್ಕಳಿಗೆ ಬಾಡಿಗೆ ತಾಯಿ ಮೂಲಕ ಜನ್ಮ ನೀಡಿದ್ದಾರೆ. ತಾಯಿ ಮಕ್ಕಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅವಳಿ ಮಕ್ಕಳಿಗೆ ಸುಫಿ ಮತ್ತು ಸೊಲೈಲ್ ಎಂದು ನಾಮಕರಣ ಮಾಡಿದ್ದಾರೆ ಲೀಸಾ ರೇ. ಸುಫಿ ಎಂದರೆ ಅತೀಂದ್ರಿಯ ಮತ್ತು ಸೊಲೈಲ್ ಎಂದರೆ ಸೂರ್ಯ ಎಂದರ್ಥವಂತೆ.
'ತನ್ನೆರಡು ಹೆಣ್ಣು ಮಕ್ಕಳಿಗೆ ಶಕ್ತಿ, ಸ್ವತಂತ್ರ ಮತ್ತು ದೃಢ ಮನಸ್ಸು ನೀಡಿ, ತಮ್ಮಿಷ್ಟದಂತೆ ಹಾರುವ ಅವಕಾಶ ನೀಡುವೆ...' ಎಂದು ಮನದಾಳದ ಮಾತನ್ನು ಈ ನಟಿ ಶೇರ್ ಮಾಡಿಕೊಂಡಿದ್ದಾರೆ.
