ಮುಂಬೈ [ಸೆ.10]  1995 ರಲ್ಲಿ ಮಿಸ್ ಯುಎಸ್ ಎ ಮತ್ತು ಮಿಸ್ ಯುನಿವರ್ಸ್ ಗೆ ಭಾಜನಾರಿದ್ದ ಭುವನ ಸುಂದರಿ ಕಿರೀಟ ಹೊತ್ತಿದ್ದ ಚೆಲ್ಸಿ ಸ್ಮಿತ್  ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ.. ಅವರಿಗೆ 45 ವರ್ಷ ವಯಸ್ಸಾಗಿತ್ತು.

1995ರಲ್ಲಿ ಸ್ಮಿತ್ ಗೆ ಸುಂದರಿ ಕಿರೀಟ ಧಾರಣೆ ಮಾಡಿದ್ದ ಸುಶ್ಮಿತಾ ಸೇನ್ ತಮ್ಮ ಗೆಳತಿಯೊಂದಿಗಿನ ಒಡನಾಟವನ್ನು ನೆನೆದಿದ್ದಾರೆ.ನನಗೆ ಅವಳ ಅತ್ಯದ್ಭುತ ನಗು ಇಷ್ಟ, ಅವಳ ಜೀವನೋತ್ಸಾಹ ಇನ್ನೂ ಇಷ್ಟ ಎಂದು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

1995ರ ರನ್ನರ್ ಅಪ್ ಶಾನ್ನಾ ಮೊಕ್ಲರ್ ಸಹ ಸ್ಮಿತ್ ಅವರೊಂದಿಗಿನ ತಮ್ಮ ಒಡನಾಟ ಹಂಚಿಕೊಂಡಿದ್ದಾರೆ.  ಅವಳು ನನಗೆ ನೀಡಿದ ಪ್ರೀತಿ ಎಂದಿಗೂ ಮರೆಯಲಾರೆ ಎಂದಿದ್ದಾರೆ.