ಸ್ಯಾಂಡಲ್’ವುಡ್’ಗೆ ಎಂಟ್ರಿಯಾಗ್ತಾ ಇದೆ ಮಿಸ್ ದಿವಾ ಹುಡುಗಿಯ ಸಿನಿಮಾ!

entertainment | Tuesday, June 12th, 2018
Suvarna Web Desk
Highlights

ರೋಷ್ಮಿತಾ ಹರಿಮೂರ್ತಿ. ಪ್ರತಿಷ್ಟಿತ ‘ಮಿಸ್ ದಿವಾ’ ಹಾಗೂ ‘ಮಿಸ್ ಇಂಡಿಯಾ’ ಕಿರೀಟ ಮುಡಿಗೇರಿಸಿಕೊಂಡಿರುವ ಹುಡುಗಿ. ಫಿಲಿಫೈನ್ಸ್‌ನಲ್ಲಿ ನಡೆದ ‘ಮಿಸ್ ಯೂನಿವರ್ಸ್’ಗೆ  ಭಾರತವನ್ನು ಪ್ರತಿನಿಧಿಸಿದ ಬೆಂಗಳೂರಿನ ಚೆಲುವೆ. ಈ ವರ್ಷವೇ ಅವರ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಗ್ಯಾರಂಟಿ. ಮುಂಬೈನಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆಯುತ್ತಿರುವ ರೋಷ್ಮಿತಾ ಜತೆ ಕನ್ನಡ ಪ್ರಭ ಮಾತುಕತೆ.

ರೋಷ್ಮಿತಾ ಹರಿಮೂರ್ತಿ. ಪ್ರತಿಷ್ಟಿತ ‘ಮಿಸ್ ದಿವಾ’ ಹಾಗೂ ‘ಮಿಸ್ ಇಂಡಿಯಾ’ ಕಿರೀಟ ಮುಡಿಗೇರಿಸಿಕೊಂಡಿರುವ ಹುಡುಗಿ. ಫಿಲಿಫೈನ್ಸ್‌ನಲ್ಲಿ ನಡೆದ ‘ಮಿಸ್ ಯೂನಿವರ್ಸ್’ಗೆ ಭಾರತವನ್ನು ಪ್ರತಿನಿಧಿಸಿದ ಬೆಂಗಳೂರಿನ ಚೆಲುವೆ. ಈ ವರ್ಷವೇ ಅವರ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಗ್ಯಾರಂಟಿ. ಮುಂಬೈನಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆಯುತ್ತಿರುವ ರೋಷ್ಮಿತಾ ಜತೆ ಮಾತುಕತೆ.

ಮಾಡೆಲಿಂಗ್‌ನಲ್ಲೇ ದೊಡ್ಡ ಹೆಸರಿರುವಾಗ, ಸಿನಿಮಾದ ಆಕರ್ಷಣೆ ಯಾಕೆ?

ಮಾಡೆಲಿಂಗ್ ಮತ್ತು ಸಿನಿಮಾ ಎರಡೂ ಗ್ಲಾಮರ್ ಜಗತ್ತೇ. ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿರುವ ನಟಿಯರೆಲ್ಲ ಮಾಡೆಲಿಂಗ್ ಜಗತ್ತಿನಿಂದಲೇ ಬಂದವರು. ನನಗೆ, ಮಾಡೆಲಿಂಗ್‌ನಲ್ಲಿದ್ದಾಗಲೇ ಸಿನಿಮಾದ ಆಕರ್ಷಣೆ ಇದ್ದೇ ಇತ್ತು, ನಾಯಕಿ ಆಗುವ ಕನಸಿತ್ತು. ಅದಕ್ಕೆ ಕಾಲ ಈಗ ಬಂದಿದೆ.

ಸಿನಿಮಾಕ್ಕೆ ಬರಬೇಕಾದ್ರೆ ಸಿದ್ಧತೆ ಬೇಕಲ್ವಾ?

ಅದಕ್ಕಾಗಿಯೇ ನಾನೀಗ ಮುಂಬೈನಲ್ಲಿದ್ದೇನೆ. ಇಲ್ಲಿಗೆ ಬಂದು ಆರೇಳು ತಿಂಗಳಾದವು. ಅಲ್ಲಿಂದಲೇ ಆ್ಯಕ್ಟಿಂಗ್, ಮಾರ್ಷಲ್ ಆರ್ಟ್ಸ್, ಡಾನ್ಸ್ ಟ್ರೈನಿಂಗ್‌ನಲ್ಲಿ ಬ್ಯುಸಿ ಆಗಿದ್ದೇನೆ. ಕ್ಯಾಮರಾ ಎದುರಿಸುವ ಮಟ್ಟಿಗೆ ಒಂದಷ್ಟು ಕಲಿತುಕೊಂಡಿದ್ದೇನೆ.

ಆ್ಯಕ್ಟಿಂಗ್ ಟ್ರೈನಿಂಗ್ ಶುರುಮಾಡಿದ್ದೀರಿ ಅಂದ್ರೆ, ಸಿನಿಮಾದ ಆಫರ್ ಬಂದಿರಬೇಕು ಅಲ್ವೇ?

ನಾನು ‘ಮಿಸ್ ದಿವಾ’ ಕಿರೀಟ ತೋಟ್ಟಾಗಲೇ ನಾಲ್ಕೈದು ನಿರ್ದೇಶಕರು ಆಫರ್ ಕೊಟ್ಟಿದ್ದರು. ಆಗ ನನ್ನ ಟಾರ್ಗೆಟ್ ‘ಮಿಸ್ ಯೂನಿವರ್ಸ್’ ಆಗಿತ್ತು. ಅದರ ಸಿದ್ಧತೆಗೆ ಸಮಯ ಬೇಕಿತ್ತು. ಹಾಗಾಗಿ, ಸಿನಿಮಾದ ಅವಕಾಶ ಕೈತಪ್ಪಿದ್ದವು. ಈಗ ನಾನೇ ಆಸಕ್ತಿ ತೋರಿದ ಕಾರಣ ಆಫರ್ ಹೆಚ್ಚಾಗಿಯೇ ಬರುತ್ತಿವೆ. 

ಸಿನಿಮಾ ಜಗತ್ತಿಗೆ ಎಂಟ್ರಿ ಆಗುವುದು ಯಾವಾಗ?
ಬಂದಿರೋ ಸಿನಿಮಾಗಳ ಆಫರ್ ಈಗಲೂ ಮಾತುಕತೆ ಹಂತದಲ್ಲಿವೆ. ಕತೆ ಕೇಳ್ಬೇಕು, ಪಾತ್ರದ ಬಗ್ಗೆ ಮಾಹಿತಿ ಪಡೆಯಬೇಕು, ಆಮೇಲೆ ನಾನು ಓಕೆ ಹೇಳ್ಬೇಕು. ಆ ಪ್ರಕ್ರಿಯೆ ನಾನು ಮುಂಬೈನಿಂದ ಬೆಂಗಳೂರಿಗೆ ಬಂದ್ಮೇಲೆ ಶುರುವಾಗಲಿವೆ. ಇಷ್ಟರಲ್ಲೇ ನಾನು ನಾಯಕಿ ಆಗಿ ಕ್ಯಾಮರಾ ಎದುರಿಸುವುದು ಖಚಿತ. 

ನಿಮ್ಮ ಮೊದಲ ಎಂಟ್ರಿ ಸ್ಟಾರ್ ಜತೆಗಿರುತ್ತಾ ಅಥವಾ ಹೊಸಬರ ಜತೆಗಿರುತ್ತಾ?
ಈಗಾಗಲೇ ಜನಪ್ರಿಯತೆ ಪಡೆದ ಸ್ಟಾರ್ ಜತೆಗೆ. ಆ ನಿಟ್ಟಿನಲ್ಲೇ ಒಂದಷ್ಟು ಮಾತುಕತೆ ನಡೆದಿವೆ. ಸದ್ಯಕ್ಕೆ ಯಾವುದು ರಿವೀಲ್ ಆಗಬಾರದು ಅನ್ನೋದು ನಿರ್ದೇಶಕರ ಆಜ್ಞೆ. 

ಕನ್ನಡದಲ್ಲಿ ನೀವು ಇಷ್ಟಪಡುವ ನಟರುಯಾರು?
ಪುನೀತ್ ರಾಜ್‌ಕುಮಾರ್, ಸುದೀಪ್, ದರ್ಶನ್, ಯಶ್- ಅವರ ಸಿನಿಮಾ ನೋಡುತ್ತಾ ಬಂದವಳು ನಾನು. ಹಾಗೆ ನೋಡಿದ್ರೆ, ಅವರ ಸಿನಿಮಾಗಳೇ ನನಗೆ ಇಲ್ಲಿಗೆ ಬರಲು ಸ್ಫೂರ್ತಿ. ಅವರ ಜತೆಗೆ ಅಭಿನಯಿಸುವ ಆಸೆಯೂ ಇದೆ. ಅದು ಸಾಧ್ಯವೋ ಇಲ್ಲವೋ ನಂಗೊತ್ತಿಲ್ಲ. ಆದ್ರೆ, ಈಗ ಬಂದ ಆಫರ್ ಪ್ರಕಾರ ಇಷ್ಟು ಸ್ಟಾರ್‌ಗಳ ಪೈಕಿ ಒಬ್ಬರ ಜತೆಗೆ ಸಿನಿಮಾ ಫಿಕ್ಸ್ ಆಗುವುದು ಖಚಿತ. ಅದರಲ್ಲೂ ಪರ್‌ಫಾರ್ಮೆನ್ಸ್ ಪಾತ್ರಗಳಲ್ಲೇ ಅಭಿನಯಿಸಬೇಕು ಎನ್ನುವ ಆಸೆಯೂ ಇದೆ. ರಮ್ಯಾ, ರಕ್ಷಿತಾ ಅವರ ಹಾಗೆ ಗ್ಲಾಮರ್ ಪಾತ್ರಗಳ ಜತೆಗೆ ಡಿ ಗ್ಲಾಮರ್ ಪಾತ್ರಗಳಲ್ಲೂ  ಕಾಣಿಸಿಕೊಳ್ಳುವ ಆಸೆ. 

Comments 0
Add Comment

    ಈ ಇಬ್ಬರು ನಟನಟಿಯರ ಬಗ್ಗೆ ಗುಸು ಗುಸು, ಗೆಳೆಯನ ಜೊತೆಯಿರುವಾಗ ಸಿಕ್ಕಿಬಿದ್ದ ಸ್ಟಾರ್ ಮಗಳು

    news | Sunday, June 24th, 2018