'16ನೇ ವಯಸ್ಸಿನಲ್ಲಿಯೇ ನನ್ನನ್ನು ಕಾಂಡೋಮ್ ನಿಂದ ಕಟ್ಟಲಾಯ್ತು'

Mira Sorvino says she was choked with a condom during audition at 16
Highlights

ಭಾರತದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಒಬ್ಬೊಬ್ಬರೆ ನಟಿಯರು ಸತ್ಯ ಹೊರಹಾಕುತ್ತಿದ್ದರೆ ಅತ್ತ ಅಮೆರಿಕದಲ್ಲೂ ಒಂದು ಸುದ್ದಿ ಸ್ಫೋಟವಾಗಿದೆ. ಅಮೆರಿಕದ ಚಿತ್ರತಾರೆ, ಹಾಲಿವುಡ್ ನಟಿ ಮಾರಿಯಾ ಸರ್ವಿನೋ ಅಂಥದ್ದೊಂದು ಆರೋಪ ಮಾಡಿದ್ದಾಳೆ. ಏನು ಅಂತೀರಾ ಈ ಸುದ್ದಿ ಓದಿ...

ವಾಷಿಂಗ್ ಟನ್(ಜು.13) ಅಮೆರಿಕದ ಚಿತ್ರತಾರೆ, ಹಾಲಿವುಡ್ ನಟಿ ಮಾರಿಯಾ ಸರ್ವಿನೋ ತಾನು 16 ವರ್ಷದಲ್ಲಿ ಇದ್ದಾಗಲೇ ನಿರ್ದೇಶಕರೊಬ್ಬರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ ಎಂದು ಸತ್ಯ ಬಿಚ್ಚಿಟ್ಟಿದ್ದಾರೆ. Mighty Aphrodite  ಚಿತ್ರಕ್ಕೆ ಹಲವಾರು ಪ್ರಶಸ್ತಿಗಳ ಗರಿ ಬಾಚಿಕೊಂಡಿರುವ ನಟಿ ಇಂಥದ್ದೊಂದು ಆರೋಪ ಮಾಡಿರುವುದು ಇಡಿ ಹಾಲಿವುಡ್ ನ್ನೇ ಬೆಚ್ಚಿ ಬೀಳಿಸಿದೆ.

ನಾನು 16 ವರ್ಷದಲ್ಲಿ ಇದ್ದಾಗಲೇ ಈ ಘಟನೆ ನಡೆದಿದ್ದು ಇದೀಗ ಹೇಳುತ್ತಿದ್ದೇನೆ. ಹಾರರ್ ಸಿನಿಮಾವೊಂದಕ್ಕೆ ನನ್ನನ್ನು ಅಡಿಶನ್ ಗೆ ಕರೆಯಲಾಗಿತ್ತು. ಈ ವೇಳೆ ಆ ಚಿತ್ರದ ನಿರ್ಧೇಶಕರು ನನ್ನನ್ನು ಕುರ್ಚಿಯೊಂದಕ್ಕೆ ಕಟ್ಟಿಹಾಕುತ್ತಾರೆ. ಇದು ಚಿತ್ರೀಕರಣದ ದೃಶ್ಯ ಎಂದು ಹೇಳುತ್ತಾರೆ.

ಒಂದಿಷ್ಟು ಸಮಯ ನನ್ನ ಮೈಕೈ ಮುಟ್ಟಿದ ನಿರ್ದೇಶಕ ನಂತರ ಕಿಸೆಯಿಂದ ಕಾಂಡೋಮ್ ವೊಂದನ್ನು ತೆಗೆದು ಅದರಿಂದ ನನ್ನ ಕಟ್ಟುತ್ತಾರೆ. ಕುರ್ಚಿಯ ಸುತ್ತ ಕಾಂಡೋಮ್ ನಿಂದ ಬಿಗಿಯುತ್ತಾರೆ ಎಂದು ನಟಿ ಸಂದರ್ಶನವೊಂದರಲ್ಲಿ ಹೇಳಿದ್ದು ಇದೀಗ ಹಾಲಿವುಡ್ ನಲ್ಲಿ ಬಿಸಿ ಹುಟ್ಟುಹಾಕಿದೆ.

loader