ಮುಂಬೈ:  ಸಲ್ಮಾನ್ ನಡೆಸಿಕೊಡುವ ಬಿಗ್ ಬಾಸ್ ಹಿಂದಿ 12 ನೇ ಸೀಸನ್ ಇನ್ನೇನು ಆರಂಭವಾಗುತ್ತಿದ್ದು ಈಗಾಗಲೇ ಅನೇಕ ಸೆಲೆಬ್ರಿಟಿಗಳನ್ನು ಈ ಸಂಬಂಧ ಸಂಪರ್ಕಿಸಲಾಗುತ್ತಿದೆ. ಇದೀಗ ಬಾಲಿವುಡ್ ಸೆಲೆಬ್ರಿಟಿ ದಂಪತಿ  ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ. 

ಈ ಬಾರಿ ಇತ್ತೀಚೆಗಷ್ಟೇ ವಿವಾಹವಾದ ಇಂಡಿಯನ್ ಸೂಪರ್ ಮಾಡೆಲ್ ಮಿಲಿಂದ್ ಸೋಮನ್ ಹಾಗೂ ಪತ್ನಿ ಅಂಕಿತಾ ಕೋನ್ವಾರ್ ಸ್ಪರ್ಧಿಗಳಾಗಿ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ. 

ಈಗಾಗಲೇ ಬಿಗ್ ಬಾಸ್ ಆಯೋಜಕರು ಸೆಲೆಬ್ರಿಟಿಗಳನ್ನು ಸಂಪರ್ಕಿಸುತ್ತಿದ್ದು ಈ ಬಾರಿ ಬಿಗ್ ಮನೆಗೆ ತೆರಳುವವರ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ. ಈ ಬಾರಿ  ಸಿದ್ದಾರ್ಥ್ ಸಾಗರ್,  ಸೃಷ್ಟಿ ರೋಡೆ, ಮನೀಶ್ ನಾಗದೇವ್ ಸೇರಿದಂತೆ ಅನೇಕರು ತೆರಳುವ ಸಾಧ್ಯತೆ ಇದೆ.