ಅನು ಮಲೀಕ್‌ ಅವರು ತಾನು 15 ವರ್ಷದ ಅಪ್ರಾಪ್ತೆ ಬಾಲಕಿಯಾಗಿದ್ದಾಗಲೇ ತನ್ನ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದಾರೆ ಎಂದು ಗಾಯಕಿ ಶ್ವೇತಾ ಪಂಡಿತ್‌ ಆರೋಪ ಮಾಡಿದ್ದಾರೆ.

ಮುಂಬೈ: ಬಾಲಿವುಡ್‌ನ ಸಂಗೀತ ಸಂಯೋಜಕ ಅನು ಮಲಿಕ್‌ ಅವರು ಇತರರನ್ನು ಕ್ರೂರವಾಗಿ ಹಿಂಸಿಸುತ್ತಾರೆ ಎಂಬುದಾಗಿ ಗಾಯಕಿ ಸೋನಾ ಮಹಾಪಾತ್ರ ಸುಳಿವು ನೀಡಿದ ಬೆನ್ನಲ್ಲೇ, ಅನು ಮಲೀಕ್‌ ಅವರು ತಾನು 15 ವರ್ಷದ ಅಪ್ರಾಪ್ತೆ ಬಾಲಕಿಯಾಗಿದ್ದಾಗಲೇ ತನ್ನ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದಾರೆ ಎಂದು ಗಾಯಕಿ ಶ್ವೇತಾ ಪಂಡಿತ್‌ ಆರೋಪ ಮಾಡಿದ್ದಾರೆ.

ಈ ಕುರಿತು ತಮ್ಮ ಟ್ವೀಟರ್‌ ಖಾತೆಯಲ್ಲಿ ವಿಸ್ತೃತ ಲೇಖನ ಬರೆದಿರುವ ಶ್ವೇತಾ, ‘2000ನೇ ಇಸವಿಯಲ್ಲಿ ಮೊಹಬ್ಬಟೀನ್‌ ಚಿತ್ರದಲ್ಲಿ ನಾನು ಪ್ರಮುಖ ಗಾಯಕಿಯಾಗಿದ್ದೆ. ಇದರ ನಂತರ ಸಂಗೀತದ ಉದ್ಯಮದಲ್ಲಿ ಉತ್ತಮ ಗೀತೆಗಳನ್ನು ಪಡೆಯಲು ಯತ್ನಿಸುತ್ತಿದೆ. ಈ ನಡುವೆ, 2001ರ ಮಧ್ಯಂತರ ಅವಧಿಯಲ್ಲಿ ಅಂಧೇರಿಯ ಎಂಪೈರ್‌ ಸ್ಟುಡಿಯೋದಲ್ಲಿ ಭೇಟಿಯಾಗುವಂತೆ ಮಲೀಕ್‌ ಅವರ ಮ್ಯಾನೇಜರ್‌ ಕರೆ ಮಾಡಿದ್ದಾಗ ಭಾರೀ ಖುಷಿಯಾಗಿದ್ದೆ.

ಈ ಪ್ರಕಾರ ಸ್ಟುಡಿಯೋಗೆ ಹೋದಾಗ, ಸಣ್ಣ ಕ್ಯಾಬಿನ್‌ನಲ್ಲಿ ನನ್ನ ಧ್ವನಿ ಪರೀಕ್ಷಿಸಿದ ಮಲೀಕ್‌, ಈ ಗೀತೆ ನಿನಗೆ ಹಾಡಲು ಕೊಡಬೇಕಾದರೆ, ಈಗ ನನಗೆ ಮೊದಲು ಮುತ್ತು ಕೊಡಬೇಕು ಎಂದು ಹೇಳಿದರು. ನಾನಾಗ ಇನ್ನೂ 15 ವರ್ಷದ ಶಾಲಾ ಬಾಲಕಿಯಾಗಿದ್ದೆ. ಈ ಘಟನೆ ನನಗೆ ಯಾರೋ ಒಬ್ಬರು ಹೊಟ್ಟೆಗೆ ಚಾಕುವಿನಿಂದ ತಿವಿದಂತಾಗಿತ್ತು. ಬಳಿಕ ತುಂಬಾ ದಿನಗಳ ಬಳಿಕ ನಾನು ಖಿನ್ನತೆಗೊಳಗಾಗಿದ್ದೆ,’ ಎಂದು ಹೇಳಿಕೊಂಡಿದ್ದಾರೆ.

Scroll to load tweet…