ಹೀಗಿದ್ದಾರಾ ಮೇಘನಾ? ಥಟ್ಟನೆ ತಿರುಗಿ ನೋಡುವಂತೆ ಮಾಡಿದ ಈ ಫೋಟೋ ಆಯ್ತು ವೈರಲ್

First Published 24, Feb 2018, 3:37 PM IST
Meghana Gaonkar Photo viral
Highlights

ಅರರರೇ, ಯಾರಿದು? ಥಟ್ಟನೆ ತಿರುಗಿ ನೋಡುವಂತೆ ಮಾಡುವ ಈ ಫೋಟೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಇದ್ಯಾವುದೋ ಹೊಸ ಸಿನಿಮಾದ ಫೋಟೋ ಇರಬೇಕು ಅಂದುಕೊಂಡು ಅವರನ್ನೇ ಕೇಳಿದರೆ, ಅವರು ಅಲ್ಲ ಅನ್ನುತ್ತಾರೆ.

ಬೆಂಗಳೂರು (ಫೆ. 24): ಅರರರೇ, ಯಾರಿದು? ಥಟ್ಟನೆ ತಿರುಗಿ ನೋಡುವಂತೆ ಮಾಡುವ ಈ ಫೋಟೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಇದ್ಯಾವುದೋ ಹೊಸ ಸಿನಿಮಾದ ಫೋಟೋ ಇರಬೇಕು ಅಂದುಕೊಂಡು ಅವರನ್ನೇ ಕೇಳಿದರೆ, ಅವರು ಅಲ್ಲ ಅನ್ನುತ್ತಾರೆ.

‘ಸುಮ್ಮನೆ ಮೇಕ್‌ಓವರ್‌ಗೆಂದು ಫೋಟೋ ಶೂಟ್ ಮಾಡಿಸಿದೆ. ಆಗ ಮೇಕಪ್ ಮಾಡೋರು  ಹೀಗೊಂದು ಹೊಸ ಕಾಸ್ಟ್ಯೂಮ್ ಇದೆ ಅಂದರು. ನೋಡಿದರೆ ಚೆನ್ನಾಗಿತ್ತು. ಇಷ್ಟವಾಯಿತು. ಅದೇ  ಕಾಸ್ಟ್ಯೂಮಿನಲ್ಲಿ ಫೋಟೋ ಶೂಟ್ ಮಾಡಿಸಿದೆ. ಎಲ್ಲರಿಗೂ ಇಷ್ಟವಾಗಿದೆ’ ಅಂತಾರೆ. ಬಹುಶಃ ಮೇಘನಾ ಇಷ್ಟೊಂದು ಆಕರ್ಷಕವಾಗಿ ಸಿನಿಮಾಗಳಲ್ಲೂ ಕಾಣಿಸಿಕೊಂಡಿರಲಿಲ್ಲ. ‘ನಮ್ ಏರಿಯಾಲ್ ಒಂದಿನ’,  ‘ವಿನಾಯಕ ಗೆಳೆಯರ ಬಳಗ’, ‘ತುಘ್ಲಕ್’, ‘ಚಾರ್ ಮಿನಾರ್’ ಹಾಗೂ ‘ಸಿಂಪಲ್ಲಾಗ್ ಇನ್ನೊಂದ್ ಲವ್  ಸ್ಟೋರಿ’ಚಿತ್ರಗಳನ್ನು ನೋಡಿದವರು ಅರೇ, ಹೀಗಿದ್ದಾರಾ ಮೇಘನಾ ಅಂತ ಕಣ್ಣರಳಿಸಿ ನೋಡಿದ್ದೇ ತಡ, ಫೋಟೋ ವೈರಲ್ ಆಗಿದೆ. 

loader