ಬಿಗ್ ಬಾಸ್ ಶೋನ ಮಾಜಿ ಸ್ಪರ್ಧಿ ವಿಜೆ ಬನಿ ಬಾಡಿ ಶೇಮಿಂಗ್ ವಿಚಾರದ ವಿರುದ್ಧ ಮಾತನಾಡಿದ್ದಾರೆ. ಈ ಬಾಡಿ ಶೇಮಿಂಗ್ ಎಂಬುದು ಹುಟ್ಟಿಕೊಂಡಿದ್ದೇ ಮಾಧ್ಯಮಗಳಿಂದ.. ಮಾಧ್ಯಮಗಳು ಮಾರ್ಕೆಟಿಂಗ್ ತಂತ್ರವಾಗಿ ಇದನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸೌಂದರ್ಯದ ಹೆಸರಿನಲ್ಲಿ 2000ನೇ ಇಸವಿ ವೇಳೆ ಜಾರಿಗೆ ಬಂದ ಮ್ಯಾಗಜೀನ್‌ಗಳು ಮೊದಲು ಬಾಡಿ ಶೇಮಿಂಗ್ ಅಳವಡಿಕೆ ಮಾಡಿಕೊಂಡವು. ಯಾವುದಾದರೂ ಉತ್ಪನ್ನದ ಮೂಲಕ ಕಾಂತಿಯುತ ಚರ್ಮ, ಉತ್ತಮ ದೇಹದ ಆಕಾರ ಪಡೆದುಕೊಳ್ಳಬಹುದು ಎಂಬ ವಿಚಾರವನ್ನು ಜನರ ತಲೆಗೆ ತುಂಬಲು ಆರಂಭಿಸಿದರು ಎಂದು ಹೇಳಿದ್ದಾರೆ.

ವಯಸ್ಸಾದಂತೆ ಚೆಲುವು ಕಳೆದುಕೊಳ್ಳುತ್ತೀರಿ ಎಂದು ಹೇಳುತ್ತ ನಿಮ್ಮ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತಾರೆ. ವ್ಯಾಯಾಮ ಮತ್ತು ವಿವಿಧ ತರಬೇತಿ ನಿಮ್ಮ ಮಾತ್ರ ನಿಮ್ಮನ್ನು ನಿಮ್ಮ ಸೌಂದರ್ಯವನ್ನು ಕಾಪಾಡುತ್ತದೆ ಎಂದು ಸಲಹೆ ಸಹ ನೀಡಿದ್ದಾರೆ.