Asianet Suvarna News Asianet Suvarna News

ರಾಖಿ ಸಾವಂತ್ ಮೊರೆ ಹೋದ #MeToo ಆರೋಪಿಗಳು!

ತನುಶ್ರೀ ದತ್ತಾ ವಿರುದ್ಧ ರಾಖಿ ಸಾವಂತ್ ಅತ್ಯಾಚಾರ ಆರೋಪ | ರಾಖಿ ಸಾವಂತ್ ಮೊರೆ ಹೋದ ಮೀ ಟೂ ಆರೋಪಿಗಳು 

Me Too alligators seeks help of Rakhi Sawanth
Author
Bengaluru, First Published Oct 26, 2018, 12:10 PM IST

ಬೆಂಗಳೂರು (ಅ. 26): ದೇಶದಲ್ಲಿ ಮೊದಲ ಮೀಟೂ ಆರೋಪ ಮಾಡಿದ್ದ ತನುಶ್ರೀ ದತ್ತಾ ವಿರುದ್ಧವೇ ಅತ್ಯಾಚಾರದ ಆರೋಪ ಮಾಡಿರುವ ಬಾಲಿವುಡ್ ನಟಿ ರಾಖಿ ಸಾವಂತ್‌ಗೆ ಈಗ ದೇಶದ ಎಲ್ಲೆಡೆಯಿಂದ ದಿಢೀರ್ ಬೇಡಿಕೆ ಬಂದಿದೆ.

ತನುಶ್ರೀ ದತ್ತಾ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾಳೆ, ಆಕೆ ಆಂತರಿಕವಾಗಿ ಗಂಡಸು, ಅವಳು ನನಗೆ ಡ್ರಗ್ಸ್ ತಿನ್ನಿಸಿದ್ದಾಳೆ ಎಂದು ರಾಖಿ ಅಚ್ಚರಿಯ ಆರೋಪ ಮಾಡಿದ್ದಾಳೆ. ಇದರಿಂದಾಗಿ ತನುಶ್ರೀಯಿಂದ ಆರೋಪಕ್ಕೊಳಗಾದ ನಾನಾ ಪಾಟೇಕರ್‌ಗೆ ನಿರಾಳವಾಗಿದೆ.

ಹೀಗಾಗಿ ತಮ್ಮ ವಿರುದ್ಧ ಆರೋಪ ಮಾಡಿದವರ ವಿರುದ್ಧವೂ ಏನಾದರೂ ಆರೋಪ ಮಾಡುವಂತೆ ಮೀಟೂ ಆರೋಪಿಗಳೆಲ್ಲ ರಾಖಿ ಸಾವಂತ್‌ಳ ಮೊರೆ ಹೋಗಿದ್ದಾರೆ. ಅದಕ್ಕೆ ರಾಖಿ ದುಬಾರಿ ಹಣ ಕೇಳುತ್ತಿದ್ದಾಳೆಂದು ಸುಳ್‌ಸುದ್ದಿ ಮೂಲಗಳು ಹೇಳಿವೆ.


 

Follow Us:
Download App:
  • android
  • ios