ನಟಿ ಮಯೂರಿ ಮತ್ತೆ ಕಿರುತೆರೆಗೆ ಮರಳಿದ್ದಾರೆ. 'ಅಶ್ವಿನಿ ನಕ್ಷತ್ರ' ಖ್ಯಾತಿಯ ಈ ಬೆಡಗಿ 'ಉದಯ'ದ ಜೋ ಜೋ ಲಾಲಿ'ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಧಾರಾವಾಹಿ 75 ಕಂತು ಪೂರೈಸಿದೆ. ಈಗೆಲ್ಲೆ ಮಾಧವ, ರುಕ್ಮುಣಿ ರಾಧಾ ಅವರ ಜೊತೆಗೆ ಲೀಲಾ ಕೂಡ ಸೇರ್ಪಡೆ ಆಗುತ್ತಿದ್ದಾರೆ. ಅದೇ ಲೀಲಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ನಟಿ ಮಯೂರಿ. ಇದೊಂದು ಸ್ಪೆಷಲ್ ಎಪಿಸೋಡ್.ಸಣ್ಣದೊಂದು ಪಾತ್ರ. ನೊಂದ ಮನಕ್ಕೆ ಸಾಂತ್ವನ ಹೇಳುವ ಸಂದರ್ಭ. ಧಾರಾವಾಹಿ ತಂಡ ಈ ಪಾತ್ರಕ್ಕೆ ಕೇಳಿಕೊಂಡಿತ್ತು. ಒಲ್ಲೆ ಎನ್ನಲಾಗಲಿಲ್ಲ. ಹಾಗಾಗಿ ಈ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಕಿರುತೆರೆಗೆ ಬಾರದೆ ಒಂದು ವರ್ಷ ಆಗಿತ್ತು. ಲೀಲಾ ಪಾತ್ರದ ಅವಕಾಶ ಮತ್ತೆ ಕಾಣಿಸುಕೊಳ್ಳುವಂತೆ ಮಾಡಿರುವುದು ಖುಷಿ ಆಗುತ್ತಿದೆ. ಅಂತಾರೆ ಮಯೂರಿ. ಜುಲೈ 24 ಸೋಮವಾರದಿಂದ ಸಂಜೆ 6.30ಕ್ಕೆ ಇದು ಪ್ರಸಾರವಾಗಲಿದೆ. ಸದ್ಯಕ್ಕೆ 'ಕರಿಯ-2' ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿರುವ ನಟಿ ಮಯೂರಿ ಇತ್ತೀಚಿಗಷ್ಟೆ 'ಆಟಕ್ಕುಂಟು ಲೆಕ್ಕಕ್ಕಿಲ್ಲ' ಹೆಸರಿನ ಚಿತ್ರಕ್ಕೂ ನಾಯಕಿ ಆಗಿದ್ದಾರೆ.