ಬಾಲಿವುಡ್ ಮಾದಕ ನಟಿ ಸನ್ನಿ ಲಿಯೋನ್ ಗೆ ಹೊಸ ಪತಿ ಸಿಕ್ಕಿದ್ದಾರೆ. ಅವರು ಯಾರೆಂದು ನಿಮಗೆ ಕುತೂಹಲ ಕಾಡುತ್ತಿದೆಯಾ ಹಾಗಾದರೆ ಈ ಪ್ರಶ್ನೆ ಇಲ್ಲಿದೆ ನೋಡಿ ಉತ್ತರ.
ಮುಂಬೈ : ಬಾಲಿವುಡ್ ನಟಿ ಸನ್ನಿ ಲಿಯೋನ್ ಜೀವನಾಧಾರಿತವಾದ ವೆಬ್ ಸಿರೀಸ್ ಆರಂಭವಾಗುತ್ತಿದೆ. ಸನ್ನಿಯ ಜೀವನದ ಕಥೆಯನ್ನು ನೋಡಲು ಆಕೆಯ ಅಭಿಮಾನಿಗಳೂ ಕೂಡ ಕಾತರದಿಂದ ಕಾಯುತ್ತಿದ್ದಾರೆ. ಜಿ5 ನಲ್ಲಿ ಈಕೆಯ ಜೀವನಾಧಾರಿತವಾದ ಸಿರೀಸ್ ಕರಣ್ ಜಿತ್ ಕೌರ್ ಪ್ರಸಾರವಾಗಲಿದೆ.
ಸನ್ನಿ ಏಕೆ ಕೆನಡಾದಿಂದ ಭಾರತಕ್ಕೆ ಬಂದರು. ಯಾಕೆ ಹೆಸರನ್ನು ಸನ್ನಿ ಎಂದು ಬದಲಾಯಿಸಿಕೊಂಡರು ಎನ್ನುವುದು ಸೇರಿದಂತೆ ಅನೇಕ ವಿಚಾರಗಳಿಗೆ ಈ ವೆಬ್ ಸಿರೀಸ್ ನಲ್ಲಿ ಉತ್ತರ ದೊರೆಯಲಿದೆ. ಇನ್ನು ಈ ಸಿರೀಸ್ ನಲ್ಲಿ ಸನ್ನಿ ಪಾತ್ರವನ್ನು ಸ್ವತಃ ಸನ್ನಿ ಲಿಯೋನ್ ಅವರೇ ನಿರ್ವಹಿಸಲಿದ್ದಾರೆ.
ಆಕೆಯ ಪತಿ ಪಾತ್ರವನ್ನು ನಿಜವಾದ ಗಂಡ ಡೇನಿಯಲ್ ವೇಬರ್ ನಿರ್ವಹಿಸದೇ ದಕ್ಷಿಣ ಆಫ್ರಿಕಾದ ನಟ ಮಾರ್ಕ್ ಬೂಕ್ನರ್ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಆಕೆಯ ಜೀವನದಲ್ಲಿ ನಡೆದ ಎಲ್ಲಾ ವಿಚಾರಗಳನ್ನೂ ಕೂಡ ಸಂಪೂರ್ಣವಾಗಿ ತಿಳಿಸಲಾಗುತ್ತದೆ.
