ಮಾನ್ವಿತಾ ಹರೀಶ್ ನಟನೆಗೆ ಆರ್‌ಜಿವಿ ಫುಲ್ ಫಿದಾ

First Published 29, Mar 2018, 1:43 PM IST
Manvita Harish to act in Ramgapal Varma movie
Highlights

ಸೂರಿ ನಿರ್ದೇಶನದ 'ಟಗರು' ಸಿನಿಮಾ ವೀಕ್ಷಿಸಲು ನಗರಕ್ಕೆ ಆಗಮಿಸಿದ ಖ್ಯಾತ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ನಟಿ ಮಾನ್ವಿತಾ ಹರೀಶ್ ಅಭಿನಯನಕ್ಕೆ ಫುಲ್ ಫಿದಾ ಆಗಿದ್ದಾರೆ.

ಬೆಂಗಳೂರು: ಸೂರಿ ನಿರ್ದೇಶನದ 'ಟಗರು' ಸಿನಿಮಾ ವೀಕ್ಷಿಸಲು ನಗರಕ್ಕೆ ಆಗಮಿಸಿದ ಖ್ಯಾತ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ನಟಿ ಮಾನ್ವಿತಾ ಹರೀಶ್ ಅಭಿನಯನಕ್ಕೆ ಫುಲ್ ಫಿದಾ ಆಗಿದ್ದಾರೆ.

ಇಲ್ಲಿಗೆ ಬಂದು, ಚಿತ್ರ ತಂಡದೊಂದಿಗೆ ಚಿತ್ರ ವೀಕ್ಷಿಸಿ, ಸಂತೋಷಗೊಂಡ ವರ್ಮಾ ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಮಾನ್ವಿತಾಗೆ ತಮ್ಮ ಮುಂದಿನ ಚಿತ್ರದಲ್ಲಿ ಅವಕಾಶವೊಂದನ್ನು ನೀಡಿದ್ದಾಗಿಯೂ ಹೇಳಿದ್ದಾರೆ. ಸಾಮಾನ್ಯವಾಗಿ ಮಾನ್ವಿತಾ ಪಡೆಯುವ ಸಂಭಾವನೆಗಿಂತಲೂ 10 ಲಕ್ಷ ರೂ. ಹೆಚ್ಚು ನೀಡುವುದಾಗಿ ವರ್ಮಾ ಹೇಳಿದ್ದಾರೆ. ಈ ನಟಿಯ ನಟನಾ ಕೌಶಲ್ಯಕ್ಕೆ ಬೇಷ್ ಎಂದಿದ್ದಾರೆ.

ಮಾನ್ವಿತಾಗೆ ಈಗಾಗಲೇ ಟೋಕನ್ ಅಡ್ವಾನ್ಸ್ ನೀಡಿದ್ದಾಗಿ ಹೇಳಿರುವ ವರ್ಮಾ, ಸೂರಿ ನಿರ್ದೇಶನದ ಚಿತ್ರವೊಂದನ್ನು ನಿರ್ಮಿಸುವುದಾಗಿಯೂ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
 

loader