1. ಮಂಗಳೂರು ಮೂಲದ ಅಕ್ಷತಾ, ಇಂಜಿನಿಯರಿಂಗ್‌ ಮುಗಿಸಿದ್ದಾರೆ. ಮೊದಲಿನಿಂದಲ್ಲೂ ಗ್ಲಾಮರ್‌ ಜಗತ್ತು ಅಂದರೆ ಇಷ್ಟ. ಹೀಗಾಗಿ ಇಂಜಿನಿಯರಿಂಗ್‌ ಮುಗಿಸಿದವರನ್ನು ಸೀದಾ ಕೈ ಬೀಸಿ ಕರೆದಿದ್ದು ಮಾಡೆಲಿಂಗ್‌ ಲೋಕ.

2. ಮಾಡೆಲಿಂಗ್‌ ಕ್ಷೇತ್ರದಲ್ಲಿ ಸಾಕಷ್ಟುಶೋಗಳಲ್ಲಿ ಪಾಲ್ಗೊಂಡಿದ್ದಾರೆ. ರಾರ‍ಯಂಪ್‌ ಮೇಲೆ ವಾಕ್‌ ಮಾಡುವ ಜತೆಗೆ ಶೋ ಟಾಪರ್‌ ಆಗಿಯೂ ಮಾಡೆಲಿಂಗ್‌ನಲ್ಲಿ ಮಿಂಚಿದ್ದಾರೆ. ಹತ್ತಾರು ಡಿಸೈನ್‌ಗಳ ಕಾಸ್ಟೂಮ್‌ಗಳಲ್ಲಿ ಜಗಮಗಿಸಿರುವ ಅಕ್ಷತಾ ಶ್ರೀನಿವಾಸ್‌ ಅವರಿಗೆ ಸಿನಿಮಾ ಕನಸು ಈಡೇರಿದ್ದು ನಿರ್ದೇಶಕ ಶಿವತೇಜಸ್‌ ಮೂಲಕ.

3. ಮಳೆ, ಧೈರ್ಯ, ಲೌಂಡ್‌ ಸ್ಪೀಕರ್‌ ಚಿತ್ರಗಳ ನಂತರ ಶಿವತೇಜಸ್‌ ಈಗ ಇನ್ನೂ ಹೆಸರಿಡದ ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ಎಲ್ಲರಿಗೂ ಗೊತ್ತಿದೆ. ಸದ್ದಿಲ್ಲದೆ ಸಟ್ಟೇರಿರುವ ಈ ಚಿತ್ರಕ್ಕೆ ಅಕ್ಷತಾ ಶ್ರೀನಿವಾಸ್‌ ನಾಯಕಿ ಆಗಿ ಆಯ್ಕೆ ಆಗುವ ಮೂಲಕ ಮೊದಲ ಸಿನಿಮಾ ಹೆಜ್ಜೆಗಳನ್ನು ಶುರು ಮಾಡಿದ್ದಾರೆ. ಚಿರಂಜೀವಿ ಸರ್ಜಾ ಚಿತ್ರದಲ್ಲಿ ಅಕ್ಷತಾ ಅವರದ್ದು ಆರ್ಯವೇದಿಕ್‌ ಡಾಕ್ಟರ್‌ ಪಾತ್ರ.

4. ಮೊದಲ ಚಿತ್ರ ಬಿಡುಗಡೆಯಾಗುವ ಮುನ್ನವೇ ಎರಡನೇ ಚಿತ್ರಕ್ಕೂ ಬುಕ್‌ ಆಗಿದ್ದಾರೆ. ನೀನಾಸಂ ಸತೀಶ್‌ ನಾಯಕನಾಗಿ ನಟಿಸುತ್ತಿರುವ, ಉದಯ್‌ ಕೆ ಮಹ್ತಾ ನಿರ್ಮಾಣದ ‘ಬ್ರಹ್ಮಚಾರಿ’ ಚಿತ್ರದಲ್ಲಿ ಅಕ್ಷತಾ ಅವರೂ ಸಹ ನಾಯಕಿ. ಅದಿತಿ ಪ್ರಭುದೇವ ಚಿತ್ರದ ಮತ್ತೊಬ್ಬ ನಾಯಕಿ ಚಂದ್ರಮೋಹನ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

5. ಬ್ರಹ್ಮಚಾರಿ ಚಿತ್ರಕ್ಕೆ ಒಂದು ಹಂತದ ಚಿತ್ರೀಕರಣ ಶೆಡ್ಯೂಲ್‌ ಮುಗಿದಿದೆ. ಒಳ್ಳೆಯ ರೀತಿಯ ಪಾತ್ರವಿದೆಯಂತೆ. ಗ್ಲಾಮರ್‌ಗೆ ಪ್ರಾಮುಖ್ಯತೆ ಇರುವ ಸಿನಿಮಾ. ಈ ಎರಡೂ ಚಿತ್ರಗಳಿಗೂ ಆಡಿಷನ್‌ ಮೂಲಕ ಅಕ್ಷತಾ ಆಯ್ಕೆ ಆಗಿದ್ದಾರೆ.

6. ಅಕ್ಷತಾ ಶ್ರೀನಿವಾಸ್‌ ಅವರಿಗೆ ಗ್ಲಾಮರ್‌ ಹಾಗೂ ನಟನೆಗೆ ಮಹತ್ವ ಇರುವ ಪಾತ್ರಗಳೆಂದರೆ ಇಷ್ಟ. ಅಂಥ ಪಾತ್ರಗಳ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಸದ್ಯಕ್ಕೆ ಮಾಡೆಲಿಂಗ್‌ ಕೂಡ ಬಿಟ್ಟು ಚಿತ್ರರಂಗದತ್ತ ಮುಖ ಮಾಡಿದ್ದಾರೆ.