Asianet Suvarna News Asianet Suvarna News

ಡ್ಯಾನ್ಸ್ ಕಲಿಯಲು ಆಸಕ್ತಿ ಇದೆಯಾ? ಇಲ್ಲಿದೆ ನಿಮಗೊಂದು ಅವಕಾಶ

ಸಿನಿಮಾ ಎಂಥವರನ್ನು ಸೆಳೆಯುವ ಕ್ಷೇತ್ರ. ಆದರೆ, ಬಣ್ಣದ ನಂಟಿಗೆ ಬರುವುದಕ್ಕೆ ಬೇಕಾದ ತಯಾರಿ ವಿಚಾರದಲ್ಲಿ ಮಾತ್ರ ಸಾಕಷ್ಟು ಹಿಂದೆಯೇ ಉಳಿದಿರುತ್ತಾರೆಂಬುದು ಹಲವರ ಮಾತು. ಅದಕ್ಕೆ ತಕ್ಕಂತೆ ನಟನೆ ಸೇರಿದಂತೆ ವಿವಿಧ ವಿಭಾಗಗಳ ಸಿನಿಮಾ ಪಾಠಗಳನ್ನು ಕಲಿಸುವುದಕ್ಕಾಗಿಯೇ ಒಂದಿಷ್ಟು ಸಂಸ್ಥೆಗಳು ಹುಟ್ಟಿಕೊಂಡಿವೆ. ಆ ಸಾಲಿಗೆ ಈಗ ‘ನವರಸ ನಟನ ಅಕಾಡೆಮಿ’ ಸೇರಿಕೊಂಡಿದೆ.

Maluru Srinivas Dance Class
  • Facebook
  • Twitter
  • Whatsapp

ಬೆಂಗಳೂರು (ಜ.04): ಸಿನಿಮಾ ಎಂಥವರನ್ನು ಸೆಳೆಯುವ ಕ್ಷೇತ್ರ. ಆದರೆ, ಬಣ್ಣದ ನಂಟಿಗೆ ಬರುವುದಕ್ಕೆ ಬೇಕಾದ ತಯಾರಿ ವಿಚಾರದಲ್ಲಿ ಮಾತ್ರ ಸಾಕಷ್ಟು ಹಿಂದೆಯೇ ಉಳಿದಿರುತ್ತಾರೆಂಬುದು ಹಲವರ ಮಾತು. ಅದಕ್ಕೆ ತಕ್ಕಂತೆ ನಟನೆ ಸೇರಿದಂತೆ ವಿವಿಧ ವಿಭಾಗಗಳ ಸಿನಿಮಾ ಪಾಠಗಳನ್ನು ಕಲಿಸುವುದಕ್ಕಾಗಿಯೇ ಒಂದಿಷ್ಟು ಸಂಸ್ಥೆಗಳು ಹುಟ್ಟಿಕೊಂಡಿವೆ. ಆ ಸಾಲಿಗೆ ಈಗ ‘ನವರಸ ನಟನ ಅಕಾಡೆಮಿ’ ಸೇರಿಕೊಂಡಿದೆ.

ಜಗ್ಗೇಶ್ ಅವರ ಬೆಂಬಲದೊಂದಿಗೆ ಕಳೆದ 22 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿರುವ ಮಾಲೂರು ಶ್ರೀನಿವಾಸ್ ಶುರು ಮಾಡಿರುವ ಅಕಾಡೆಮಿ ಇದು. ನಟನೆ ಸೇರಿದಂತೆ ಬೇರೆ ಬೇರೆ ಕನಸುಗಳನ್ನು ಹೊತ್ತು ಚಿತ್ರರಂಗಕ್ಕೆ ಬರುವವರಿಗೆ ತರಬೇತಿ ನೀಡುವುದಕ್ಕೆ ಮುಂದಾಗಿದ್ದು, ಜ.7 ರಿಂದ ತರಬೇತಿಗಾಗಿಯೇ ಆಡಿಷನ್ ಮಾಡಲಾಗುತ್ತಿದೆ. ನಟನೆ ಬಗ್ಗೆ ತಿಳಿದುಕೊಳ್ಳಲು ಬರುವ ಆಸಕ್ತ ವಿದ್ಯಾರ್ಥಿಗಳಿಗಾಗಿ ಕೇವಲ ಪುಸ್ತಕದಲ್ಲಿರುವುದನ್ನಷ್ಟೇ ಬೋಧಿಸದೇ, ಪ್ರಾಕ್ಟಿಕಲ್ ಆಗಿಯೂ ಸಾಕಷ್ಟು ಅಂಶಗಳನ್ನು ತಿಳಿಸಿಕೊಡುವ ಉದ್ದೇಶದಿಂದ ಈ ಸಂಸ್ಥೆಯನ್ನು ಆರಂಭಿಸಲಾಗಿದೆಯಂತೆ. ಹಿರಿಯ ನಿರ್ದೇಶಕರಾದ ಎಸ್.ನಾರಾಯಣ್, ಎಸ್.ಮಹೇಂದರ್, ಅನಂತರಾಜು, ವಿಶಾಲ್ ರಾಜ್, ಲಕ್ಕಿ ಶಂಕರ್, ಉದಯ್ ಪ್ರಕಾಶ್ ಹಾಗೂ ನೀನಾಸಂ ಬಳಗದ ನುರಿತವರು ಇಲ್ಲಿ ಪಾಠ-ತರಬೇತಿ ನೀಡಲಿದ್ದಾರೆ. ನಟನೆ, ನಿರ್ದೇಶನ, ಡೈಲಾಗ್ ಡೆಲಿವರಿ ಹಾಗೂ ಕ್ಯಾಮೆರಾ ಎದುರಿಸುವ ಪರಿ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟು ಅವರಿಂದಲೇ ಕಿರುಚಿತ್ರವೊಂದನ್ನು ತಯಾರು ಮಾಡಿಸುವ ಯೋಜನೆ ಹಾಕಿಕೊಂಡಿದೆ ಈ ಸಂಸ್ಥೆ. ಮೂರು ತಿಂಗಳ ಕೋರ್ಸ್ ಇದಾಗಿದೆ.

ಬೆಂಗಳೂರಿನ ಸದಾಶಿವನಗರದಲ್ಲಿರುವ ‘ನವರಸ ನಟನ ಅಕಾಡೆಮಿ’ಯಲ್ಲಿ ಜನವರಿ 7 ರಿಂದ ಆಡಿಷನ್ ನಡೆಯಲಿದ್ದು ತರಗತಿಗಳು ಫೆಬ್ರವರಿ 5 ರಿಂದ ಶುರುವಾಗಲಿದೆ. ಹೆಚ್ಚಿನ ಮಾಹಿತಿಗಾಗಿ: ಮಾಲೂರು ಶ್ರೀನಿವಾಸ್ ದೂ: 9945266271 ಸಂಪರ್ಕಿಸಬಹುದು.   

Follow Us:
Download App:
  • android
  • ios