. ನಂತರ ಕೆಲ ಮನಸ್ತಾಪಗಳಿಂದ ಪರಸ್ಪರ ಇಬ್ಬರು ದೂರವಾಗಿದ್ದರು. ಹಿಂದಿನ ಪರಿಚಯವನ್ನೇ ಬಂಡವಾಳ ಮಾಡಿಕೊಂಡ ಈತ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ.

ತಿರುವನಂತಪುರಂ(ಜು.25): ಮಲಯಾಳಂ'ನ ನಟಿ ಮೈಥಿಲಿಯ ಅರೆನಗ್ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿವೆ. ಅಲ್ಲದೆ ಇದಕ್ಕೆ ಸಂಬಂಧಪಟ್ಟಂತೆ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಕಿರಣ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ.

ಕೆಲವು ದಿನಗಳ ಹಿಂದೆ ಈತ ನಟಿ ಮೈಥಿಲಿಯೊಂದಿಗೆ ಆತ್ಮೀಯತೆ ಹೊಂದಿದ್ದ. ನಂತರ ಕೆಲ ಮನಸ್ತಾಪಗಳಿಂದ ಪರಸ್ಪರ ಇಬ್ಬರು ದೂರವಾಗಿದ್ದರು. ಹಿಂದಿನ ಪರಿಚಯವನ್ನೇ ಬಂಡವಾಳ ಮಾಡಿಕೊಂಡ ಈತ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ.

ನಟಿ ಈತನ ಬೆದರಿಕೆಗೆ ಬಗ್ಗದಿದ್ದಾಗ ಆಕೆಯ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಬಗ್ಗೆ ನಟಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಕಿರಣ್'ಕುಮಾರ್'ನನ್ನು ಪೊಲೀಸರು ಬಂಧಿಸಿದ್ದಾರೆ.