ಈ ಹಿನ್ನಲೆಯಲ್ಲಿ ಕ್ಯಾಪ್ಟನ್ ನಿರ್ಣಯದಂತೆ ಉತ್ತಮ ಪ್ರದರ್ಶನ ನೀಡಿದರಿಗೆ ಮನೆಯಲ್ಲಿ 2 ಗಂಟೆ ಹೆಚ್ಚು ನಿದ್ದೆ ಕೊಟ್ಟ ಬಿಗ್‌ಬಾಸ್‌‌, ಕಳಪೆ ಪ್ರದರ್ಶನ ನೀಡಿದ ಮಾಳವಿಕಗೆ ಕುತ್ತಿಗೆಯಲ್ಲಿ 'ಕಳಪೆ' ಅಂತಾ ಬರೆದಿರುವ ಬೋರ್ಡ್‌ ಹಾಕಿಕೊಳ್ಳುವ ಶಿಕ್ಷೆ ನೀಡಿದ್ದಾರೆ.
ಬೆಂಗಳೂರು(ನ.11): ಬಿಗ್ ಬಾಸ್ ಮನೆಯಲ್ಲಿ ಈ ವಾರ ನಡೆದ ಟಾಸ್ಕ್ ನಲ್ಲಿ ಕಳೆಪ ಪ್ರದರ್ಶನ ನೀಡಿದ್ದಾರೆ ಎಂದು ಕ್ಯಾಪ್ಟನ್ ನಿರ್ಧರಿಸಿದ್ದರಿಂದಾಗಿ ನಟಿ ಮಾಳವಿಕ 'ಕಳಪೆ' ಎಂಬ ಬೋರ್ಡುನ್ನು ಕುತ್ತಿಗೆಗೆ ನೇತು ಹಾಕಿಕೊಂಡು ತಿರುಗಾಡ ಬೇಕಾಗಿದೆ.
ಕಳಪೆ ಪ್ರದರ್ಶನ ಎನ್ನುವ ಕಾರಣಕ್ಕೆ ಈ ಶಿಕ್ಷೆ ನೀಡಲಾಗಿದ್ದು, ಕ್ಯಾಪ್ಟನ್ ಮೋಹನ್ ಬಿಗ್ ಬಾಸ್ ಆದೇಶದಂತೆ ವರ್ಸ್ಟ್ ಪರ್ಫಾರ್ಮರ್ ಆಗಿ ಮಾಳವಿಕ ಅವರನ್ನು ಆಯ್ಕೆ ಮಾಡಿದರೆ, ಬೆಸ್ಟ್ ಪರ್ಫಾರ್ಮರ್ ಕೀರ್ತಿ, ಕಾರುಣ್ಯ ಹೆಸರು ಸೂಚಿಸಿದರು.
ಈ ಹಿನ್ನಲೆಯಲ್ಲಿ ಕ್ಯಾಪ್ಟನ್ ನಿರ್ಣಯದಂತೆ ಉತ್ತಮ ಪ್ರದರ್ಶನ ನೀಡಿದರಿಗೆ ಮನೆಯಲ್ಲಿ 2 ಗಂಟೆ ಹೆಚ್ಚು ನಿದ್ದೆ ಕೊಟ್ಟ ಬಿಗ್ಬಾಸ್, ಕಳಪೆ ಪ್ರದರ್ಶನ ನೀಡಿದ ಮಾಳವಿಕಗೆ ಕುತ್ತಿಗೆಯಲ್ಲಿ 'ಕಳಪೆ' ಅಂತಾ ಬರೆದಿರುವ ಬೋರ್ಡ್ ಹಾಕಿಕೊಳ್ಳುವ ಶಿಕ್ಷೆ ನೀಡಿದ್ದಾರೆ.
ಈ ಪ್ರಕ್ರಿಯೇ ನಡೆದ ನಂತರದಿಂದಲೇ ಮೌನಕ್ಕೆ ಶರಣಾಗಿದ ಮಾಳವಿಕ ನನಗೆ ಇಷ್ಟೊಂದು ಅವಮಾನ ಮಾಡುತ್ತಿದ್ದಾರೆ, ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಇರುವುದಿಲ್ಲ ಹೋಗುವೇ ಎಂದು ಮಾತನಾಡುತ್ತಿದ್ದಾರೆ.
