ಕಳೆದ ಅಕ್ಟೋಬರ್‌ನಲ್ಲಿ #MeToo ಅಬ್ಬರ ಜೋರಾಗಿತ್ತು. ಕನ್ನಡವೂ ಸೇರಿ ಹಲವು ಚಿತ್ರರಂಗಗಳಲ್ಲಿ ಹಿರಿಯ ನಟರಿಗೂ ಇಂಥದ್ದೊಂದು ಕಳಂಕ ತಟ್ಟಿತ್ತು. ಆಗ ಈ ಬಗ್ಗೆ ತುಟಿ ಪಿಟಕ್ ಎನ್ನದ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಈದೀಗ ಮೊದಲ ಬಾರಿ ಮೌನ ಮುರಿದಿದ್ದಾರೆ.

 

ಹಿರಿಯ ನಟ ಲೋಕನಾಥ್ ಹಾಗೂ ನಿರ್ದೇಶಕ ಸೌಮಿಕ್ ಸೇನ್ ವಿರುದ್ಧ ಕೇಳಿ ಬಂದ #MeToo ಆರೋಪಕ್ಕೆ ಮಾಧುರಿ, 'ಇದು ಶಾಕಿಂಗ್. ಅವರು ಗೊತ್ತು, ಆದರೆ, ಆ ರೀತಿಯಲ್ಲಿ ಗೊತ್ತಿಲ್ಲ....' ಎನ್ನುವ ಮೂಲಕ ಆರೋಪಗಳಿಗೆ ಪುಷ್ಟಿ ನೀಡುವಂಥ ಹೇಳಿಕೆ ನೀಡಿದ್ದಾರೆ. ಇಂಥ ಹೇಳಿಕೆಯನ್ನು ಹೇಗೆ ಶ್ಲೇಷಿಸಬಹುದು ಎಂಬುವುದೇ ಇದೀಗ ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ.

 

ಅಲೋಕ್ ನಾಥ್ 19 ವರ್ಷಗಳ ಹಿಂದೆ ತಮ್ಮ ಮೇಲೆ ಅತ್ಯಾಚಾರವೆಸಗಿದ್ದರೆಂದು ಸಾಹಿತಿ ವಿಂತಾ ನಂದನ್ ಆರೋಪಿಸಿದ್ದು, ಬಾಲಿವುಡ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಈ ಆರೋಪದ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಸ್ಪಷ್ಟ ಚಿತ್ರಣವೇ ಸಿಗುತ್ತಿಲ್ಲ. ಇಂಥದ್ದೇ ಆರೋಪ ಸೌಮಿಕ್ ವಿರುದ್ಧವೂ ಕೇಳಿ ಬಂದಿತ್ತು.

ಮಾಡಬಾರದ್ದೆಲ್ಲಾ ಮಾಡಿದ್ರೂ #MeTooನಲ್ಲಿ ನನ್ನ ಹೆಸರಿಲ್ಲ: ಶತ್ರುಘ್ನ ಸಿನ್ಹಾ

'ನಾನು ಇಬ್ಬರೊಡನೆಯೂ ಕಾರ್ಯ ನಿರ್ವಹಿಸಿದ್ದೇನೆ. ಆದರೆ, ಈ ಇಬ್ಬರ ಆ ಮತ್ತೊಂದು ಮುಖ ನೋಡಿಲ್ಲ....' ಎಂಬುದನ್ನು ಸ್ಪಷ್ಟವಾಗಿ ಹೇಳಿರುವ ದಕ್ ದಕ್ ಬೆಡಗಿ ಮಾಧುರಿ, ಆರೋಪವನ್ನೂ ಅಲ್ಲಗಳೆದಿಲ್ಲ. 'ನನ್ನ ಹತ್ತಿರ ಹಾಗೆ ನಡೆದುಕೊಂಡಿಲ್ಲ. ಆದರೆ, ಇನ್ನೊಬ್ಬರ ಜತೆ ಹೇಗೆ ನಡೆದುಕೊಂಡಿದ್ದಾರೋ ಗೊತ್ತಿಲ್ಲ,' ಎಂಬರ್ಥ ಬರೋ ಹಾಗಿದೆ ಇವರ ಮಾತಿನ ವರಸೆ. ಅಂದರೆ ಮಾಧುರಿಗೂ ಈ ನಟ, ನಿರ್ದೇಶಕರ ನಡೆ ಬಗ್ಗೆ ಗೊತ್ತಿತ್ತು. ಆದರೆ, ತಮಗೆ ಸಂಬಂಧಿಸಿದ್ದಲ್ಲವೆಂದು ಸುಮ್ಮನಿದ್ದರು ಹಾಗೂ ಸುಮ್ಮನಿದ್ದಾರೆ ಎನ್ನುವ ಅನುಮಾನಗಳನ್ನೂ ಹುಟ್ಟು ಹಾಕಿದೆ ಹಮ ಸಾಥ್ ಸಾಥ್ ಹೈ, ಖಳನಾಯಕ್ ನಟಿಯ ಈ ಹೇಳಿಕೆ.

ಮಾಧುರಿಯದ್ದು ಜಾಣ ನಡೆಯೋ, ಜಾಣ ಕುರುಡೋ ಗೊತ್ತಾಗುತ್ತಿಲ್ಲ. ಮಹಿಳೆಯರ ಪರ ಧ್ವನಿ ಎತ್ತಬೇಕಾದ ಇವರು #MeToo ಆರೋಪ ಮಾಡಿದವರ ಸಪೋರ್ಟಿಗೆ ಏಕೆ ಬರುತ್ತಿಲ್ಲವೆಂಬುವುದೂ ಅರ್ಥವಾಗುತ್ತಿಲ್ಲ.