ಮುಂಬೈ[ಫೆ.08]: ‘ನಾನು ಮಾಡಬಾರದ ಎಲ್ಲಾ ಕೆಲಸಗಳನ್ನು ಮಾಡಿದ್ದರೂ ನನ್ನ ಹೆಸರು ಮೀಟೂ ಅಭಿಯಾನದಲ್ಲಿ ಕೇಳಿ ಬಂದಿಲ್ಲ. ಈ ವಿಷಯದಲ್ಲಿ ನಾನು ಭಾಗ್ಯಶಾಲಿ ಎಂದು ಹಿರಿಯ ನಟ ಹಾಗೂ ರಾಜಕಾರಣಿ ಶತ್ರುಘ್ನ ಸಿನ್ಹಾ ಹೇಳಿಕೊಂಡಿದ್ದಾರೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶತ್ರುಘ್ನ ಸಿನ್ಹಾ, ‘ಪ್ರತಿಯೊಬ್ಬ ಯಶಸ್ವಿ ಪುರುಷನ ಅವನತಿಯ ಹಿಂದೆಯೂ ಮಹಿಳೆಯೊಬ್ಬಳು ಇರುತ್ತಾಳೆ. ಮೀಟೂ ಅಭಿಯಾನದ ಇಂದಿನ ಕಾಲದಲ್ಲಿ ನಾನು ಅದೃಷ್ಟವಂತ. ನನ್ನ ವಿರುದ್ಧ ಯಾವುದೇ ಆರೋಪವೂ ಕೇಳಿ ಬಂದಿಲ್ಲ. ಯಾರಾದರೂ ನನ್ನ ವಿರುದ್ಧ ಏನಾದರೂ ಹೇಳುವುದಿದ್ದರೆ ಅದನ್ನು ದಯವಿಟ್ಟು ಹೇಳಬೇಡಿ ಎಂದೂ ಸಿನ್ಹಾ ಹೇಳಿದ್ದಾರೆ.