ಬೆಂಗಳೂರು (ಮಾ. 29):  ‘ರೋಜಾ’ ಖ್ಯಾತಿಯ ಬಹುಭಾಷಾ ತಾರೆ ಮಧುಬಾಲ ಪ್ರಸ್ತುತ ರಚಿತಾರಾಮ್  ತಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎ. ಹರ್ಷ ನಿರ್ದೇಶನ  ಹಾಗೂ ನಿಖಿಲ್ ಕುಮಾರ್ ಅಭಿನಯದ ‘ಸೀತಾರಾಮ  ಕಲ್ಯಾಣ’ ಚಿತ್ರದಲ್ಲಿ ಅವರದು ಪ್ರಮುಖ ಪಾತ್ರ.
‘ಮಧುಬಾಲ ಅವರದ್ದು ತಾಯಿ ಪಾತ್ರವಾದರೂ ಅವರ  ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಈ ಪಾತ್ರಕ್ಕೆ ಅವರೇ ಬೇಕು  ಅಂತ ಡಿಸೈಡ್ ಮಾಡಿಕೊಂಡು ಭೇಟಿ ಮಾಡಿದಾಗ ಅವರು, ಸಮಯವಕಾಶ ಕೇಳಿ ಒಪ್ಪಿದರು’ ಎನ್ನುತ್ತಾರೆ ನಿರ್ದೇಶಕ ಎ.
ಹರ್ಷ. ಮಧುಬಾಲ ಜೋಡಿಯಾಗಿ ರವಿಶಂಕರ್ ಅಭಿನಯಿಸುತ್ತಿದ್ದಾರೆ.