ಸಲ್ಮಾನ್ ಖಾನ್ ಪ್ರೇಯಸಿಯಿಂದ ಪ್ರೇಮಿಗಳಿಗೆ ಪಾಠ

First Published 15, Feb 2018, 3:10 PM IST
Lulia Vantur Lession to Lovers
Highlights

‘ನನಗೆ ಇಂಡಿಯಾದಲ್ಲಿ ಕೆಲಸ ಮಾಡಬೇಕು ಎನ್ನುವ ಆಸೆ ಇದೆ. ಆದರೆ  ಇಂಡಿಯಾ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಆದರೆ ಸಲ್ಮಾನ್ ಖಾನ್ ಜೊತೆಗೆ ಇದ್ದಾನೆ ಎನ್ನುವ ಧೈರ್ಯದಿಂದ ಇಲ್ಲಿ ಕೆಲಸ ಮಾಡಲು ಬರುತ್ತೇನೆ. ಅವನೇ ನನ್ನ ಎಲ್ಲಾ ಕೆಲಸಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾನೆ. ಹಾಗಂತ ನನಗೆ ಬಾಲಿವುಡ್‌ಗೆ ಬರಬೇಕು ಎನ್ನುವ ಆಸೆ ಇಲ್ಲ. ಸಲ್ಮಾನ್‌ಗಾಗಿ ಹಿಂದಿ ಸಾಂಗ್‌ಗಳನ್ನು ಹಾಡಲು ಪ್ರಯತ್ನ
ಮಾಡುತ್ತಿದ್ದೇನೆ’ ಎಂದು ಲುಲಿಯಾ ವಂತೂರ್ ಹೇಳಿದಾಗಿನಿಂದಲೂ ಸಲ್ಮಾನ್ ಮತ್ತು ಲುಲಿಯಾ ನಡುವಲ್ಲಿ ಏನೋ ಇದೆ ಎನ್ನುವ ಗುಸುಗುಸು ಶುರುವಾಗಿಬಿಟ್ಟಿತು.

ಬೆಂಗಳೂರು (ಫೆ.15): ‘ನನಗೆ ಇಂಡಿಯಾದಲ್ಲಿ ಕೆಲಸ ಮಾಡಬೇಕು ಎನ್ನುವ ಆಸೆ ಇದೆ. ಆದರೆ  ಇಂಡಿಯಾ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಆದರೆ ಸಲ್ಮಾನ್ ಖಾನ್ ಜೊತೆಗೆ ಇದ್ದಾನೆ ಎನ್ನುವ ಧೈರ್ಯದಿಂದ ಇಲ್ಲಿ ಕೆಲಸ ಮಾಡಲು ಬರುತ್ತೇನೆ. ಅವನೇ ನನ್ನ ಎಲ್ಲಾ ಕೆಲಸಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾನೆ. ಹಾಗಂತ ನನಗೆ ಬಾಲಿವುಡ್‌ಗೆ ಬರಬೇಕು ಎನ್ನುವ ಆಸೆ ಇಲ್ಲ. ಸಲ್ಮಾನ್‌ಗಾಗಿ ಹಿಂದಿ ಸಾಂಗ್‌ಗಳನ್ನು ಹಾಡಲು ಪ್ರಯತ್ನ
ಮಾಡುತ್ತಿದ್ದೇನೆ’ ಎಂದು ಲುಲಿಯಾ ವಂತೂರ್ ಹೇಳಿದಾಗಿನಿಂದಲೂ ಸಲ್ಮಾನ್ ಮತ್ತು ಲುಲಿಯಾ ನಡುವಲ್ಲಿ ಏನೋ ಇದೆ ಎನ್ನುವ ಗುಸುಗುಸು ಶುರುವಾಗಿಬಿಟ್ಟಿತು.

ಇದಕ್ಕೆ ಲುಲಿಯಾ ಸಲ್ಮಾನ್ ಮನೆಯ ಎಲ್ಲಾ ಖಾಸಗಿ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದದ್ದು ಈ ಸುದ್ದಿಯ ವೇಗಕ್ಕೆ ಇನ್ನಷ್ಟು ಜೀವ ತಂದಿತ್ತು. ಈಗ ಲುಲಿಯಾ ವ್ಯಾಲೆಂಟೇನ್ಸ್ ಡೇ ಅಂಗವಾಗಿ ನೀಡಿದ ಸಂದರ್ಶನವೊಂದರಲ್ಲಿ ತನ್ನ ಮದುವೆ ಬಗ್ಗೆ ಹೇಳಿಕೊಳ್ಳುವುದರ ಜೊತೆಗೆ ನಿಜವಾದ ಪ್ರೇಮಿಗಳು ಹೇಗಿರಬೇಕು ಎನ್ನುವ ಪಾಠವನ್ನೂ ಮಾಡಿದ್ದಾರೆ.

‘ನನಗೆ ಯಾವಾಗ ಮದುವೆಯಾಗುತ್ತದೆ ಎನ್ನುವುದು ನನಗಿನ್ನೂ ಗೊತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ನನಗೆ ಮದುವೆಯ ಮೇಲೆ ಹೆಚ್ಚು ನಂಬಿಕೆ ಇಲ್ಲ. ಪ್ರೀತಿ ಮಾಡುವ ಎರಡು ಜೀವಗಳಿಗೆ ಮದುವೆ  ಆಗಲೇಬೇಕಾದ ಅನಿವಾರ್ಯತೆ ಇಲ್ಲ ಎಂಬುದು ನನ್ನ ಅಭಿಪ್ರಾಯ. ಪ್ರೀತಿಯಿಂದ ಎರಡು ಜೀವಗಳು ಒಟ್ಟಾಗಿ ಜೀವನವನ್ನು ಸುಂದರವಾಗಿ ಕಟ್ಟಿಕೊಳ್ಳಬೇಕು. ಸಂಬಂಧಗಳು ಕಾಗದದ ಹಾಳೆ ಅಲ್ಲವಾದ್ದರಿಂದ ನಾವು ಒಬ್ಬರನ್ನು ಒಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡು ಮುನ್ನಡೆಯಬೇಕು’ ಎಂದು ಹೇಳಿಕೊಳ್ಳುವ ಮೂಲಕ ತಮ್ಮ ಮದುವೆ, ಪ್ರೀತಿ ವಿಚಾರವಾಗಿ ಮೌನ ವಹಿಸಿದ್ದರೂ ತಮ್ಮ ಕನಸು, ಕಲ್ಪನೆಗಳನ್ನು ಪ್ರೇಮಿಗಳ
ದಿನದಂದೇ ಅನಾವರಣ ಮಾಡಿದ್ದಾರೆ ಲುಲಿಯಾ. 

loader