ಬಿಗ್‌ಬಾಸ್‌ ಸೀಸನ್‌ 4' ಕಾರ್ಯಕ್ರಮದಲ್ಲಿ ಅತ್ಯಂತ ಜನಪ್ರಿಯವಾದ ಒಳ್ಳೆ ಹುಡುಗ ಪ್ರಥಮ್‌, ಸಂಜನಾ ಮತ್ತು ಭುವನ್‌ ಅವರ ತ್ರಿಕೋನ ಪ್ರೇಮಕತೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಕತೆಯಾಗಿ ಬರಲಿದೆ!

ಬೆಂಗಳೂರು(ಎ.04): ಬಿಗ್‌ಬಾಸ್‌ ಸೀಸನ್‌ 4' ಕಾರ್ಯಕ್ರಮದಲ್ಲಿ ಅತ್ಯಂತ ಜನಪ್ರಿಯವಾದ ಒಳ್ಳೆ ಹುಡುಗ ಪ್ರಥಮ್‌, ಸಂಜನಾ ಮತ್ತು ಭುವನ್‌ ಅವರ ತ್ರಿಕೋನ ಪ್ರೇಮಕತೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಕತೆಯಾಗಿ ಬರಲಿದೆ!

ಪ್ರಥಮ್‌, ಸಂಜನಾ ಮತ್ತು ಭುವನ್‌ ಅವರೇ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಶೋ ಕಾಲ್ಪನಿಕ ಕಥಾ ಹಂದರವನ್ನು ಒಳಗೊಂಡಿದೆ. ಈ ಕಾರ್ಯಕ್ರಮಕ್ಕೆ ‘ಸಂಜು ಮತ್ತು ನಾನು' ಎಂದು ಹೆಸರಿಡಲಾಗಿದೆ. ಈ ವಿಷಯವನ್ನು ಅಧಿಕೃತವಾಗಿ ಕಲರ್ಸ್‌ ಕನ್ನಡದ ಬಿಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌ ಅವರೇ ಫೇಸ್‌ಬುಕ್‌ ಪುಟದಲ್ಲಿ ಖಚಿತಪಡಿಸಿದ್ದು ‘ಇದೊಂದು ಸಣ್ಣ ಪ್ರಯೋಗಾತ್ಮಕ ಪ್ರಯತ್ನ' ಎಂದು ಬರೆದುಕೊಂಡಿದ್ದಾರೆ.

ಇದು ವಾರಾಂತ್ಯ 24 ಕಂತುಗಳಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮದ ಪ್ರಸ್ತಾಪ ಮಾಡದೇ ಪರೋಕ್ಷವಾಗಿ ತಾವೊಂದು ವಿಶೇಷ ಶೋನಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಪ್ರಥಮ್‌ ಅವರೂ ತಮ್ಮ ಅಧಿಕೃತ ಪುಟದಲ್ಲಿ ಇತ್ತೀಚೆಗೆ ಪದೇ ಪದೇ ಪ್ರಸ್ತಾಪ ಮಾಡುತ್ತಿದ್ದು ‘ಹೊಸ ಶೋ ಗೋಸ್ಕರ ನಾನು ಹೇರ್‌'ಸ್ಟೈಲ್‌ ಬದಲಿಸಿದ್ದೇನೆ' ಅಂತ ಬದಲಾದ ಗೆಟಪ್‌'ನ ಫೋಟೋವನ್ನೂ ಪ್ರಕಟಿಸಿದ್ದಾರೆ.