ನಟಿ ಕೃಷಿ ತಾಪಂಡ ನಟನೆಯಲ್ಲಿ ಹೊಸ ಸಿನಿಮಾ ಸೆಟ್ಟೇರಿ ಬಹುತೇಕ ಚಿತ್ರೀಕರಣ ಕೂಡ ಮುಗಿಸಿಕೊಂಡಿದೆ. ಚಿತ್ರದ ಹೆಸರು ‘ಬ್ಲಾಕ್‌’ ಎಂಬುದು. ಸುಹಾಸ್‌ ಜೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಡೂರು ಮೂಲದ ಮಂಜುನಾಥ್‌ ಪ್ರಸನ್ನ ಎಂಬುವವರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಹೊಸ ರೀತಿಯ ಕತೆಯೊಂದಿಗೆ ಬ್ಲಾಕ್‌ ಸಿನಿಮಾ ಬರುತ್ತಿದೆ. ಈ ಚಿತ್ರದ ಕುರಿತು ಕೃಷಿ ತಾಪಂಡ ಹೇಳಿದ್ದೇನು?

ಒಂದೇ ಮನೆ, ಮೂರು ದಿನದ ಕತೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡ್ರಗ್ಸ್‌ ಸ್ಕಾ್ಯಂಡಲ್‌ ಅನ್ನು ಆಧರಿಸಿ ಮಾಡಿರುವ ಕತೆ. ಮೈಸೂರಿನ ಒಂದೇ ಮನೆಯಲ್ಲಿ ಮೂರು ದಿನ ನಡೆಯುವ ಕತೆ ಇದು. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಯುತ್ತ ಬಂದಿದ್ದು, ಒಂದು ವಾರ ಮಾತ್ರ ಬಾಕಿದೆ. ಚಿಕ್ಕಮಗಳೂರಿನಲ್ಲಿ ಹಾಡುಗಳ ಚಿತ್ರೀಕರಣ ನಡೆಯಲಿದೆ. ಪೂರ್ಣಚಂದ್ರ, ಸುಚೇಂದ್ರ ಪ್ರಸಾದ್‌, ಪ್ರಶಾಂತ್‌ ಸಿದ್ದಿ ಮುಂತಾದವರು ನಟಿಸುತ್ತಿದ್ದಾರೆ. ಕ್ರೈಮ್‌, ಥ್ರಿಲ್ಲರ್‌, ಲವ್‌ ಈ ಮೂರು ಅಂಶಗಳನ್ನು ಒಳಗೊಂಡ ಚಿತ್ರವಿದೆ.

ಬ್ಲಾಕ್‌, ಲಂಕೆ ಹಾಗೂ ಭರಾಟೆ ಹೀಗೆ ಮೂರು ಚಿತ್ರಗಳು ಒಟ್ಟಿಗೆ ಚಿತ್ರೀಕರಣ ನಡೆಯುತ್ತಿವೆ. ಮೂರೂ ಚಿತ್ರಗಳಲ್ಲೂ ಮೂರು ಭಿನ್ನವಾದ ಪಾತ್ರಗಳನ್ನು ಮಾಡಿದ್ದೇನೆ.- ಕೃಷಿ ತಾಪಂಡ, ನಟಿ

ಭರಾಟೆಯಲ್ಲಿ ಅತಿಥಿ, ಲಂಕೆಗೆ ನಾಯಕಿ

ಶ್ರೀಮುರಳಿಗೆ ಬಿಗ್ ಬಾಸ್ ಸ್ಪರ್ಧಿ ‘ಭರಾಟೆ’!

ಶ್ರೀಮುರಳಿ ಅವರೊಂದಿಗೆ ‘ಭರಾಟೆ’ಯಲ್ಲೂ ನಟಿಸಿದ್ದೇನೆ. ನಾಯಕನ ಜೀವನದ ಫ್ಲ್ಯಾಷ್‌ ಬ್ಯಾಕ್‌ನಲ್ಲಿ ಬರುವ ಪಾತ್ರ ನನ್ನದು. ತುಂಬಾ ಚೆನ್ನಾಗಿದೆ. ಈ ಕಾರಣಕ್ಕೆ ನಿರ್ದೇಶಕ ಚೇತನ್‌ ಕುಮಾರ್‌ ಅವರು ಕೇಳಿದ ಕೂಡಲೇ ಒಪ್ಪಿಕೊಂಡೆ. ಇದರ ಚಿತ್ರೀಕರಣ ಕೂಡ ಮೈಸೂರಿನಲ್ಲೇ ನಡೆಯುತ್ತಿದೆ. ನಾಯಕಿಯಾಗಿ ನಟಿಸುತ್ತಿರುವ ‘ಲಂಕೆ’ ಚಿತ್ರಕ್ಕೆ ಶೇ.50 ಭಾಗ ಚಿತ್ರೀಕರಣ ಮುಕ್ತಾಯವಾಗಿದೆ. ರಾಮ್‌ ಪ್ರಸಾದ್‌ ಇದರ ನಿರ್ದೇಶಕರು. ಲೂಸ್‌ ಮಾದ ಯೋಗೀಶ್‌ ಚಿತ್ರದ ನಾಯಕ.