ಕನ್ನಡ ಚಿತ್ರರಂಗದ ದಿ ಮೋಸ್ಟ್ ಬ್ಯುಸಿ ನಟರೆಂದರೆ ದರ್ಶನ್. ತಮ್ಮ ಚಿತ್ರಗಳನ್ನು ಮಾಡುವುದಲ್ಲದೆ ಇತರರ ಸಿನಿಮಾಗಳ ಟ್ರೈಲರ್ ರಿಲೀಸ್ ನಲ್ಲಿಯೂ ಪಾಲ್ಗೊಳ್ಳುತ್ತಾರೆ. 

ಕೆಲ ದಿನಗಳ ಹಿಂದೆ ಬಿಡುಗಡೆ ಆದ ‘ಯಜಮಾನ’ ಚಿತ್ರ ರಾಜ್ಯಾದ್ಯಂತ ಯಶಸ್ಸು ಕಾಣುತ್ತಿದೆ. ಅಷ್ಟೇ ಅಲ್ಲದೇ ಈ ಚಿತ್ರವನ್ನು ವಿದೇಶಗಲ್ಲೂ ಮೆಚ್ಚಿದ್ದಾರೆ. 

ದರ್ಶನ್ ರಿಂದ ತಮ್ಮ ಚಿತ್ರಗಳ ಟ್ರೈಲರ್ ರಿಲೀಸ್ ಮಾಡಿಸಬೇಕೆಂದು ಅದೆಷ್ಟೋ  ಮಂದಿ ಕಾಯುತ್ತಾರೆ. ಯಾರಿಗೂ ನಿರಾಸೆ ಮಾಡದೆ ಸಮನಾಗಿ ಬಿಡುವು ಮಾಡಿಕೊಳ್ಳುತ್ತಾರೆ.  ತಮ್ಮ ಸಿನಿಮಾಗಳಿಗಿಂತಲೂ ಹೊಸಬರ ಸಿನಿಮಾಗೆ ಹೆಚ್ಚು ಆದ್ಯತೆ ನೀಡುತ್ತಾರೆ ಸ್ಯಾಂಡಲ್ ವುಡ್ ಸರದಾರ.

ಇನ್ನು ಯಜಮಾನ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡ  ಅನೂಪ್  ಅಭಿನಯದ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಚಿತ್ರ ‘ಉದ್ಘರ್ಷ’ ಟ್ರೈಲರ್ ರಿಲೀಸ್ ಮಾಡಿದ್ದಾರೆ.  ಪ್ರೀಮಿಯರ್ ಪದ್ಮಿನಿ ಚಿತ್ರಕ್ಕೂ ಸಾಥ್ ಕೊಟ್ಟವರು ದರ್ಶನ್.

ಸ್ಯಾಂಡಲ್ ವುಡ್ ಗಂಡುಗಲಿ ಕೆ.ಮಂಜು ಪುತ್ರ ಅಭಿನಯದ ಸಿನಿಮಾ ಪಡ್ಡೆಹುಲಿ ಟ್ರೈಲರ್ ಕೂಡ ರಿಲೀಸ್ ಮಾಡಿದ್ದಾರೆ.  

ಈ ಹಿಂದೆ ಬಜಾರ್, ಮದಗಜ,  ಭರಾಟೆ,  ಬಿಚ್ಚುಗತ್ತಿ, ಚಾಣಕ್ಷ, ಮೊಡವೆ, ಇರುವುದೆಲ್ಲವ ಬಿಟ್ಟು, ವಾಸು ನಾನ್ ಪಕ್ಕಾ ಚಿತ್ರಗಳಿಗಳ ಟ್ರೈಲರ್ ಕೂಡ ದರ್ಶನ್ ಕೈಯಿಂದಲೇ  ರಿಲೀಸ್ ಮಾಡಿಸಲಾಗಿತ್ತು.