ಬೆಂಗಳೂರಿನ ಕಲ್ಲಳ್ಳಿಯಲ್ಲಿರುವ ಸ್ಮಶಾನವನ್ನು 30 ವರ್ಷದಿಂದ ಕಾಯುತ್ತಿದ್ದ ಆಂಥೋನಿಸ್ವಾಮಿ ತಮ್ಮ ಮಗಳಿಂದ ದರ್ಶನ್‌ಗೆ ಸಹಾಯ ಪತ್ರ ಬರೆಸಿ ಅವರಿಗೆ ತಲುಪಿಸುವ ಪ್ರಯತ್ನದಲ್ಲಿದ್ದಾರೆ.

ಆಂಥೋನಿಸ್ವಾಮಿಗೆ ಹೆಣ ಸುಡುವ ಕೆಲಸ ಮಾಡುತ್ತಿರುವುದಕ್ಕೆ ಬಿಬಿಎಂಪಿ ಕಡೆಯಿಂದ ತಿಂಗಳಿಗೆ ಒಂದು ಸಾವಿರ ರೂಪಾಯಿ ಧನ ಸಹಾಯ ನೀಡಲಾಗುತ್ತಿತ್ತು. ಆದರೆ ಅದನ್ನು ಕಳೆದ 6-7 ವರ್ಷಗಳಿಂದ ಹಣವನ್ನೇ ನೀಡುತ್ತಿಲ್ಲ. ಇದರಿಂದ ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ ಹಾಗೂ ಊಟಕ್ಕೂ ಕೆಲವೊಮ್ಮೆ ಹಣವಿಲ್ಲದೇ ಪರದಾಡುತ್ತಿದ್ದಾರೆ. ಈ ವಿಚಾರವಾಗಿ ಅಧಿಕಾರಿಗಳಿಗೆ, ಶಾಸಕರಿಗೆ ಹಾಗೂ ಸಚಿವರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ.

ಹೊಟ್ಟೆಪಾಡಿಗೆ ಏನೋ ಮಾಡ್ಬೇಕಲ್ಲ, ಇಂದಿನಿಂದ ಕೆಲ್ಸ ಶುರು ಅಂದ ಡಿ-ಬಾಸ್!

ಈ ಹಿಂದೆ ಸಂಬಂಧಿಕರೊಬ್ಬರ ಕ್ರಿಯೆಗೆ ಸ್ಮಶಾನಕ್ಕೆ ಹೋಗಿದ್ದಾಗ ದರ್ಶನ್‌ನನ್ನು ಆಂಥೋನಿ ಮಾತನಾಡಿಸಿದ್ದರಂತೆ. ಅವರ ಕಷ್ಟಗಳನ್ನು ಕೇಳಿ ಹಣ ನೀಡಿ ಹೋಗಿದ್ದರಂತೆ. ಈಗ ಎದುರಾಗಿರುವ ಸಂಕಷ್ಟಕ್ಕೆ ದಾಸನೇ ದೇವರು ಎಂದು ಆಂಥೋನಿ ಕುಟುಂಬದವರು ನಂಬಿದ್ದಾರೆ.