- ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ ಕುರುಕ್ಷೇತ್ರ ಚಿತ್ರೀಕರಣ- ಸೆಟ್‌ಗೆ ಆನೆ ಮೇಲೆ ಬಂದ ನಿರ್ಮಾಪಕ ಮುನಿರತ್ನ- ದರ್ಶನ್ ಮುಖ್ಯ ಭೂಮಿಕೆಯಲ್ಲಿರೋ ಚಿತ್ರ ಕುರುಕ್ಷೇತ್ರ

ಬೆಂಗಳೂರು: ಹೈದರಾಬಾದ್‌ನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ದರ್ಶನ ದುರ್ಯೋಧನನಾಗಿ ಅಭಿನಯಿಸುತ್ತಿರುವ 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಸೆಟ್‌ಗೆ ಚಿತ್ರ ನಿರ್ಮಾಪಕ ಮುನಿರತ್ನ ಆನೆ ಮೇಲೆ ಬಂದು ಅಚ್ಚರಿ ಮೂಡಿಸಿದರು.

ಸೆಟ್‌ನಲ್ಲಿ ಇಂದು ದುರ್ಯೋಧನ ತೆರೆ ಮೇಲೆ ಬರುವ ದೃಶ್ಯದ ಚಿತ್ರೀಕರಣ ನಡೆಯಲಿದ್ದು, ಆನೆ ಮೇಲೆ ದರ್ಶನ್ ಬರಲಿದ್ದಾರೆ. ಸೆಟ್‌ಗೆ ಪತ್ರಕರ್ತರನ್ನು ಕರೆಯಿಸಿಕೊಂಡಿದ್ದು, ಮುನಿರತ್ನ ಸಹ ಸೆಟ್‌ನಲ್ಲಿದ್ದಾರೆ. ಇದಕ್ಕೂ ಮುನ್ನ ಮುನಿರತ್ನ ಅವರೇ ಆನೆ ಮೇಲೆ ಬಂದಿದ್ದು ವಿಶೇಷವಾಗಿತ್ತು.

ಸ್ಯಾಂಡಲ್‌ವುಡ್‌ನಲ್ಲಿ ಬಹು ನಿರೀಕ್ಷೆ ಮೂಡಿಸಿರುವ 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಗಾಂಧಿನಗರದ ಅನೇಕ ನಟರು ನಟಿಸಿರುವುದು ಈ ಚಿತ್ರದ ಇನ್ನೊಂದು ವಿಶೇಷ. ಮಹಾಭಾರತದ ಕಥಾಹಂದರ ಹೊಂದಿರುವ ಈ ಚಿತ್ರ, ಸ್ಯಾಂಡಲ್‌ವುಡ್‌ನಲ್ಲಿ ಹೊಸ ಪ್ರಯೋಗ ಎನ್ನಬಹುದು.