‘ಪೋಲ್  ಡ್ಯಾನ್ಸ್ ಫಿಟ್ನೆಸ್ ಪ್ರಿಯರಿಗೆ ಹೇಳಿ ಮಾಡಿಸಿದ ಮಾರ್ಗ. ಇಲ್ಲಿ ನಾನು ಫಿಟ್ ಆಗುವುದಷ್ಟೇ ಅಲ್ಲ. ಡ್ಯಾನ್ಸ್ ಮೇಲೆ ಹಿಡಿತ ಸಾಧಿಸಲೂ  ಸಹಾಯವಾಗುತ್ತೆ. ಹಾಗಾಗಿ ಐ ಲವ್ ಫಿಟ್ನೆಸ್ ಆ್ಯಂಡ್ ಪೋಲ್’ ಎಂದು ಹೇಳಿ ಡ್ಯಾನ್ಸ್ ಮತ್ತು ಫಿಟ್ನೆಸ್ ಎರಡನ್ನೂ ಪ್ರೀತಿಸುವವರಿಗೆ ಹೊಸ ದಾರಿ ತೋರಿಸಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಜಾಕ್ವೆಲಿನ್ ಫೆರ್ನಾಂಡಿಸ್ ತಾನು ಡ್ಯಾನ್ಸ್ ಮಾಡುವ ವಿಡಿಯೋವನ್ನು ಸೋಷಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿ ಮೆಚ್ಚುಗೆ ಗಿಟ್ಟಿಸಿದ್ದರು. ಇದೀಗ ಆ ಕೆಲಸವನ್ನು ಮಾಡಿದ್ದಾರೆ ಕೃತಿ ಕರಬಂಧ.

ದೆಹಲಿ ಮೂಲದ ಈ ಬೆಡಗಿ ಕನ್ನಡದಲ್ಲಿ ಚಿರು, ಗೂಗ್ಲಿಯಂತಹ ಯಶಸ್ವಿ ಚಿತ್ರದಲ್ಲಿ ನಟಿಸಿ ಸೈ ಎನ್ನಿಸಿಕೊಂಡು ಪಕ್ಕದ ಟಾಲಿವುಡ್‌ನಲ್ಲೂ ಮಿಂಚಿದ್ದರು. ಆಮೇಲೆ ಬಾಲಿವುಡ್‌ನಲ್ಲೂ ಬೇಡಿಕೆಯ ಹೆಸರಾಗಿ ಹಲವಾರು ಯಶಸ್ವಿ ಚಿತ್ರಕ್ಕೆ ಬಣ್ಣ ಹಚ್ಚಿಯಾಗಿತ್ತು. ಈಗ ಕೃತಿ ಕರಬಂಧ ಹೊಸ ಚಿತ್ರ ‘ಹೌಸ್ ಫುಲ್ ೪’ಗಾಗಿ ಡೇ ಫುಲ್ ವರ್ಕೌಟ್ ಮಾಡುತ್ತಿದ್ದಾರೆ.

ಚಿತ್ರಕ್ಕಾಗಿ ಸ್ಲಿಮ್ ಆಗಬೇಕು ಎಂದು ನಿರ್ದೇಶಕರು ಹೇಳಿದ್ದೇ ತಡ ಪೋಲ್ ಡ್ಯಾನ್ಸ್ ಶುರು ಮಾಡಿಕೊಂಡಿರುವ ಕೃತಿ ‘ಪೋಲ್ ಡ್ಯಾನ್ಸ್ ಫಿಟ್ನೆಸ್ ಪ್ರಿಯರಿಗೆ ಹೇಳಿ ಮಾಡಿಸಿದ ಮಾರ್ಗ. ಇಲ್ಲಿ ನಾನು ಫಿಟ್ ಆಗುವುದಷ್ಟೇ ಅಲ್ಲ. ಡ್ಯಾನ್ಸ್ ಮೇಲೆ ಹಿಡಿತ ಸಾಧಿಸಲೂ ಸಹಾಯವಾಗುತ್ತೆ. ಹಾಗಾಗಿ ಐ ಲವ್ ಫಿಟ್ನೆಸ್ ಆ್ಯಂಡ್ ಪೋಲ್’ ಎಂದು ಹೇಳಿ ಡ್ಯಾನ್ಸ್ ಮತ್ತು ಫಿಟ್ನೆಸ್ ಎರಡನ್ನೂ ಪ್ರೀತಿಸುವವರಿಗೆ ಹೊಸ
ದಾರಿ ತೋರಿಸಿದ್ದಾರೆ. ಈಗ ಕೃತಿ ದಿನದಲ್ಲಿ ಹೆಚ್ಚು ಸಮಯ ಫಿಟ್ನೆಸ್‌ಗಾಗಿಯೇ ಮೀಸಲಿಟ್ಟು ಬೆವರಿಳಿಸುತ್ತಿರುವುದರ ಫಲ 2019 ಕ್ಕೆ ‘ಹೌಸ್ ಫುಲ್ 4’ ಚಿತ್ರ ಬಿಡುಗಡೆ ವೇಳೆ ಸಿಗಲಿದೆ.