ಬೆಂಗಳೂರು(ಸೆ.26): ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-2 ಸ್ಯಾಂಡಲ್'ವುಡ್'ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಅರ್ಧ ಶತಕ ಬಾರಿಸಿರುವ ಗಳಿಕೆಯು 50 ಕೋಟಿ ದಾಟಿದೆ. ಇಷ್ಟು ಮೊತ್ತ ಗಳಿಸಿರುವ ಕನ್ನಡ ಚಿತ್ರಗಳು ಕೆಲವೇ ಕೆಲವು. ಈಗಾಗಲೇ ತಮಿಳಿನಲ್ಲಿ ಬಿಡುಗಡೆಯಾಗಿರುವ ಕೋಟಿಗೊಬ್ಬ ಕೆಲವು ದಿನಗಳಲ್ಲಿ ತೆಲುಗು ಹಾಗೂ ಹಿಂದಿಗೆ ಡಬ್ ಆಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಯಾಗಿರುವ ಕಿಚ್ಚ ತಮ್ಮ ಮುಂದಿನ ಚಿತ್ರದ ಹೆಸರು ವಿಷ್ಣು ಅಭಿನಯದ ಹಳೆಯ ಚಿತ್ರದ ಹೆಸರು. ಅದ್ಯಾವುದು ಅಲ್ಲ ಸಿಂಹಾದ್ರಿಯ ಸಿಂಹ-2. ಮೊದಲ ಸಿಂಹಾದ್ರಿಯ ಸಿಂಹ ಚಿತ್ರ ನಿರ್ದೇಶಿಸಿದ್ದ ಎಸ್.ನಾರಾಯಣ್ ಅವರೇ ಈ ಚಿತ್ರದ ನಿರ್ದೇಶಕರು. ನಿರ್ಮಾಪಕರು ಸಹ ಹಳೆಯ ಸಿಂಹಾದ್ರಿಯ ವಿಜಯ್ ಕುಮಾರ್. ಶೀಘ್ರದಲ್ಲಿಯೇ ಚಿತ್ರ ಮುಹೂರ್ತವಾಗಲಿದೆ.