ಒಬ್ಬ ಸ್ಟಾರ್ ಗಾಯಕನಿಗೆ ಕೇವಲ 43 ನೇ ವಯಸ್ಸಿನಲ್ಲಿ ಹೃದಯಾಘಾತವಾಗಿ ಸಾವನ್ನಪಿದರು. ಅಕಾಲಿಕ ಮರಣವಾಗಿ ಅವರು ತಮ್ಮ ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಆ ಸ್ಟಾರ್ ಗಾಯಕ ಯಾರೆಂದು ತಿಳಿಯೋಣ.
Korean Pop Singer Wheesung Death : ಕೆ-ಪಾಪ್ ಗಾಯಕ ಮತ್ತು ಗೀತರಚನೆಕಾರನಾದ ವೀಸುಂಗ್, ನಿಜವಾದ ಹೆಸರು ಚೋಯ್ ವೀಸುಂಗ್, ಸೋಮವಾರ ಸಂಜೆ ಸಿಯೋಲ್‌ನಲ್ಲಿರುವ ಅವರ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದಿ ಹಾಲಿವುಡ್ ರಿಪೋರ್ಟರ್ ಹೇಳುವ ಪ್ರಕಾರ, ಗಾಯಕನ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ವೀಸಂಗ್‌ನ ಏಜೆನ್ಸಿ, ತಾಜೋಯ್ ಎಂಟರ್‌ಟೈನ್‌ಮೆಂಟ್, ಗಾಯಕನ ಮರಣವನ್ನು ದೃಢೀಕರಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಅದರಲ್ಲಿ 'ಕಲಾವಿದ ವೀಸಂಗ್ ನಮ್ಮನ್ನು ಅಗಲಿದ್ದಾರೆ. ಅವರು ತಮ್ಮ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದ್ದಾರೆ' ಎಂದು ದಿ ಹಾಲಿವುಡ್ ರಿಪೋರ್ಟರ್ ಪಡೆದ ವರದಿ ತಿಳಿಸಿದೆ. ಈ ಬೆಳವಣಿಗೆಯಿಂದ ಕಲಾವಿದರು ಮತ್ತು ಉದ್ಯೋಗಿಗಳು ತೀವ್ರ ದುಃಖಿತರಾಗಿದ್ದಾರೆ ಎಂದು ಸಂಸ್ಥೆ ಹೇಳಿದೆ.
ವೀಸಂಗ್ ಅವರನ್ನು 2002 ರಲ್ಲಿ R & B Album'Like A movie' ಮೂಲಕ ಪರಿಚಯಿಸಲಾಯಿತು. ಅವರು ಆರ್ & ಬಿ, ಪಾಪ್ ಮತ್ತು ಹಿಪ್-ಹಾಪ್ ನಂತಹ ವೈವಿಧ್ಯಮಯ ಹಾಡುಗಳನ್ನು ಮಿಶ್ರಣ ಮಾಡುವ ಮೂಲಕ ಯಶಸ್ಸನ್ನು ಸಾಧಿಸಿದರು. ಆದಾಗ್ಯೂ, 2021 ರಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಪ್ರಬಲವಾದ ಅರಿವಳಿಕೆ ಪ್ರೊಪೋಫೋಲ್ ಅನ್ನು ಬಳಸಿದ್ದಕ್ಕಾಗಿ ಶಿಕ್ಷೆಗೊಳಗಾದಾಗ ಅವರ ವೃತ್ತಿಜೀವನವು ಹಿನ್ನಡೆಯನ್ನು ಅನುಭವಿಸಿತು.

ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು, ದಿ ಹಾಲಿವುಡ್ ರಿಪೋರ್ಟರ್ ಪ್ರಕಾರ, ಸೋಮವಾರ ಸಂಜೆ 6:29 ಕ್ಕೆ ಸಿಯೋಲ್‌ನ ಉತ್ತರ ಗ್ವಾಂಗ್‌ಜಿನ್-ಗು ಜಿಲ್ಲೆಯ ಅವರ ನಿವಾಸದಲ್ಲಿ ವೀಸಂಗ್ ಅವರ ತಾಯಿ ಮಗನ ಬಿದ್ದಿರುವುದು ಕಂಡು ಆಘಾತಕ್ಕೆ ಒಳಗಾದರು.
ತುರ್ತು ಸಿಬ್ಬಂದಿಯನ್ನು ತಕ್ಷಣವೇ ಕರೆಯಲಾಯಿತು, ಆದರೆ ವೀಸಾಂಗ್ ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿದರು. ಆ ದಿನ ಆ ಗಾಯಕ ತನ್ನ ಮ್ಯಾನೇಜರ್‌ರನ್ನು ಭೇಟಿಯಾಗಲು ಯೋಜಿಸಿದ್ದ. ಆದರೆ ಅವರು ಬರಲಿಲ್ಲ. ಅವರನ್ನು ಸಂಪರ್ಕಿಸಲೂ ಸಾಧ್ಯವಾಗಲಿಲ್ಲ. ಅದೇ ಅಪಾರ್ಟ್ಮೆಂಟ್ನಲ್ಲಿ ವಾಸಿಸುವ ಅವನ ತಾಯಿ ಅವನನ್ನು ನೋಡಲು ಹೋದಾಗ ಅವನು ಜೀವಚ್ಛವವಾಗಿ ಬಿದ್ದಿರುವುದು ಕಂಡರು. ಆಘಾತದಿಂದ ಪೊಲೀಸರಿಗೆ ಮಾಹಿತಿ ನೀಡಲಾಯಿತು ಬಳಿಕ ಪೊಲೀಸರು ಆತನ ದೇಹವನ್ನು ವಶಕ್ಕೆ ಪಡೆದರು. ಸದ್ಯ ಈ ಪ್ರಕರಣದ ಈ ಬಗ್ಗೆ ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಕೊಲೆಯೋ? ಹೃದಯಾಘಾತವೋ ತನಿಖೆ ಬಳಿಕವಷ್ಟೇ ಗೊತ್ತಾಗಲಿದೆ.
