ನವದೆಹಲಿ (ಫೆ.15): ವಿರಾಟ್ ಕೋಹ್ಲಿ ಕ್ರಿಕೆಟ್ ನಲ್ಲಿ ಮಾತ್ರ ಹೀರೋವಲ್ಲ ಹುಡುಗಿಯರ ಪಾಲಿಗೂ ಡ್ರೀಮ್ ಬಾಯ್! ಕೊಹ್ಲಿ-ಅನುಷ್ಕಾ ನಡುವಿನ ಪ್ರೀತಿ ಬ್ರೇಕ್ ಅಪ್ ಆಗಿ ಪ್ಯಾಚ್ ಅಪ್ ಆಗಿರೋದು ಗೊತ್ತಿರುವ ವಿಚಾರ. ನಮ್ಮಿಬ್ಬರ ನಡುವೆ ಸ್ನೇಹ ಬಿಟ್ಟು ಮತ್ತೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದ ಕೊಹ್ಲಿ ವ್ಯಾಲೆಂಟೈನ್ಸ್ ದಿನ ಅನುಷ್ಕಾ ಶರ್ಮಾರನ್ನು ನೆನೆಸಿಕೊಂಡಿದ್ದಾರೆ. ಅನುಷ್ಕಾ ಪ್ರತಿದಿನವೂ ನನಗೆ ವ್ಯಾಲೆಂಟೈನ್ಸ್ ಡೇಯನ್ನಾಗಿ ಮಾಡಿದ್ದಳು ಎಂದು ಹೇಳಿದ್ದಾರೆ.
ನವದೆಹಲಿ (ಫೆ.15): ವಿರಾಟ್ ಕೋಹ್ಲಿ ಕ್ರಿಕೆಟ್ ನಲ್ಲಿ ಮಾತ್ರ ಹೀರೋವಲ್ಲ ಹುಡುಗಿಯರ ಪಾಲಿಗೂ ಡ್ರೀಮ್ ಬಾಯ್! ಕೊಹ್ಲಿ-ಅನುಷ್ಕಾ ನಡುವಿನ ಪ್ರೀತಿ ಬ್ರೇಕ್ ಅಪ್ ಆಗಿ ಪ್ಯಾಚ್ ಅಪ್ ಆಗಿರೋದು ಗೊತ್ತಿರುವ ವಿಚಾರ. ನಮ್ಮಿಬ್ಬರ ನಡುವೆ ಸ್ನೇಹ ಬಿಟ್ಟು ಮತ್ತೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದ ಕೊಹ್ಲಿ ವ್ಯಾಲೆಂಟೈನ್ಸ್ ಡೇ ದಿನ ಅನುಷ್ಕಾ ಶರ್ಮಾರನ್ನು ನೆನೆಸಿಕೊಂಡಿದ್ದಾರೆ. ಅನುಷ್ಕಾ ಪ್ರತಿದಿನವೂ ನನಗೆ ವ್ಯಾಲೆಂಟೈನ್ಸ್ ಡೇಯನ್ನಾಗಿ ಮಾಡಿದ್ದಳು ಎಂದು ಹೇಳಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಅನುಷ್ಕಾ ಜೊತೆಗಿರುವ ಫೋಟೋವನ್ನು ಅಪ್ ಲೋಡ್ ಮಾಡಿ, ನೀನು ಬಯಸಿದರೆ ಪ್ರತಿದಿನವೂ ವ್ಯಾಲೆಂಟೈನ್ಸ್ ಡೇ. ನಿನ್ನಿಂದ ನನಗೆ ಪ್ರತಿದಿನವೂ ವ್ಯಾಲೆಂಟೈನ್ಸ್ ಡೇ ಎಂದು ಕೊಹ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಅನುಷ್ಕಾ ಇನ್ನೂ ಪ್ರತಿಕ್ರಿಯಿಸಿಲ್ಲ. ಅವಳು ಏನೆಂದು ಪ್ರತಿಕ್ರಿಸಬಹುದೆಂಬುದು ಸದ್ಯಕ್ಕಿರುವ ಕುತೂಹಲ!
