ಬಿಗ್ ಬಾಸ್ ಸೀಜನ್ 4 ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಶೋ ಆರಂಭವಾದಾಗ ಇದ್ದ 15 ಸ್ಪರ್ಧಿಗಳಲ್ಲಿ ಈಗ ಬಿಗ್ ಮನೆಯಲ್ಲಿ ಉಳಿದಿರುವುದು ಕೇವಲ 7 ಮಂದಿ. ಇದೀಗ ಈ ಏಳು ಮಂದಿಯ ನಡುವೆ ರಿಯಲ್ ಫೈಟ್ ಪ್ರಾರಂಭವಾಗಿದ್ದು, ಎಲ್ಲರೂ ತಾನು ಗೆಲ್ಲಲೇಬೇಕೆಂಬ ಹುಮ್ಮಸ್ಸಿನಲ್ಲಿದ್ದಾರೆ.
ಬೆಂಗಳೂರು(ಜ.13): ಬಿಗ್ ಬಾಸ್ ಸೀಜನ್ 4 ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಶೋ ಆರಂಭವಾದಾಗ ಇದ್ದ 15 ಸ್ಪರ್ಧಿಗಳಲ್ಲಿ ಈಗ ಬಿಗ್ ಮನೆಯಲ್ಲಿ ಉಳಿದಿರುವುದು ಕೇವಲ 7 ಮಂದಿ. ಇದೀಗ ಈ ಏಳು ಮಂದಿಯ ನಡುವೆ ರಿಯಲ್ ಫೈಟ್ ಪ್ರಾರಂಭವಾಗಿದ್ದು, ಎಲ್ಲರೂ ತಾನು ಗೆಲ್ಲಲೇಬೇಕೆಂಬ ಹುಮ್ಮಸ್ಸಿನಲ್ಲಿದ್ದಾರೆ.
ಹೀಗಿರುವಾಗ ನಿನ್ನೆ ನಡೆದ ಟಾಸ್ಕ್ ಬಳಿಕ ಮನೆಯಲ್ಲಿರುವ ಪ್ರತಿಯೊಬ್ಬ ಸ್ಪರ್ಧಿಗಳು ತಾವು ಮನೆಯಲ್ಲಿ ಉಳಿಸಲು ಬಯಸುವ ಇಬ್ಬರ ಹೆಸರು ಸೂಚಿಸುವಂತೆ ಆದೇಶಿಸಿದ್ದರು. ಬಿಗ್ ಬಾಸ್ ಮಾತಿನಂತೆ ಕನ್ಫೆಷನ್ ರೂಂಗೆ ತೆರಳಿ ಪ್ರತಿಯೊಬ್ಬ ಸ್ಪರ್ಧಿಯೂ ತಾವು ಉಳಿಸಬಯಸುವ ಇಬ್ಬರು ಸ್ಪರ್ಧಿಗಳ ಹೆಸರನ್ನು ಹೇಳಿದ್ದರು. ಗಮನಿಸಬೇಕಾದ ವಿಚಾರವೆಂದರೆ ಅತಿಥಿಗಳು ಹಾಗೂ ಮನೆಯ ಲೀಡರ್ ಕೀರ್ತಿಯನ್ನು ಹೊರತುಪಡಿಸಿ ಉಳಿದವರೆಲ್ಲರೂ ಸೂಚಿಸಿದ ಹೆಸರಲ್ಲಿ ರೇಖಾರವರ ಹೆಸರು ಸಾಮಾನ್ಯವಾಗಿತ್ತು. ಅಂದರೆ ಮನೆಯಲ್ಲಿರುವ ಎಲ್ಲರೂ ರೇಖಾ ಬಿಗ್ ಮನೆಯಲ್ಲಿ ಉಳಿಯಲು ಅರ್ಹ ವ್ಯಕ್ತಿ ಎಂಬುವುದನ್ನು ಒಪ್ಪಿಕೊಂಡಿದ್ದರು. ಈ ಪ್ರಕ್ರಿಯೆಯಲ್ಲಿ ಮೂರು ಮಂದಿ(ಮೋಹನ್, ಶಾಲಿನಿ ಹಾಗೂ ರೇಖಾ) ಹೆಚ್ಚು ವೋಟ್ ಪಡೆದ ಸ್ಪರ್ಧಿಗಳಾಗಿದ್ದರು.
ಇದಾದ ಬಳಿಕ ಬಿಗ್ ಬಾಸ್ ಮನೆಯ ಈ ವಾರದ ಲೀಡರ್ ಕೀರ್ತಿ ಕುಮಾರ್ ಬಳಿ 'ಹೆಚ್ಚು ವೋಟ್ ಪಡೆದು ಆಯ್ಕೆಯಾದ ಮೂವರಲ್ಲಿ ಮನೆಯಿಂದ ಹೊರ ಹೋಗಲು ನೀವು ನಾಮಿನೆಟ್ ಮಾಡುವ ಸ್ಪರ್ಧಿಯ ಹೆಸರು ಹಾಗೂ ಸೂಕ್ತ ಕಾರಣ ನೀಡಲು' ಸೂಚಿಸಿದ್ದರು. ಆದರೆ ಈ ವೇಳೆ ಕೀರ್ತಿಯ ನಿಜ ಬಣ್ಣ ಬಯಲಾಗಿದೆ. ಯಾಕೆಂದರೆ ಮನೆಯ ಎಲ್ಲಾ ಸದಸ್ಯರು ಮನೆಯಲ್ಲಿ ಇರಲು ಸೂಚಿಸಿದ ಸೂಕ್ತ ವ್ಯಕ್ತಿಗಳಲ್ಲಿ ರೇಖಾರ ಹೆಸರು ಸಾಮಾನ್ಯವಾಗಿತ್ತು. ಹೀಗಿದ್ದರೂ ಕೀರ್ತಿ ರೇಖಾರ ಹೆಸರನ್ನೇ ನಾಮಿನೇಟ್ ಮಾಡಿದ್ದಾರೆ. 'ನಮಗೆ ಯಾರನ್ನೂ ನಾಮಿನೇಟ್ ಮಾಡಲು ಯಾವುದೇ ಕಾರಣ ಇಲ್ಲ ಆದರೆ ಕಳೆದ ವಾರದ ಟಾಸ್ಕ್ ಗಮನದಲ್ಲಿಟ್ಟುಕೊಂಡು ನಾನು ರೇಖಾರನ್ನು ನಾಮಿನೇಟ್ ಮಾಡುತ್ತಿದ್ದೇನೆ' ಎಂದಿದ್ದರು. ಕೀರ್ತಿಯ ಈ ನಿರ್ಧಾರ ಮನೆಮಂದಿಗೆಲ್ಲಾ ಶಾಕ್ ನೀಡಿದಂತಿತ್ತು.
ಕೀರ್ತಿಯ ಈ ನಿರ್ಧಾರವನ್ನು ನಾವು ಪ್ರಶ್ನಿಸುವಂತಿಲ್ಲ. ಅವರು ನಾಮಿನೇಟ್ ಮಾಡಿರುವುದಕ್ಕೆ ಕಾರಣವನ್ನೂ ನೀಡಿರಬಹುದು ಆದರೆ ಗಮನ ನೀಡಬೇಕಾದ ವಿಚಾರವೆಂದರೆ ಮನೆಯ ಸದಸ್ಯರು ಸೂಚಿಸಿದ ವ್ಯಕ್ತಿಗಳಲ್ಲಿ ರೇಖಾರ ಹೆಸರು ಪ್ರತಿಯೊಬ್ಬರೂ ತಿಳಿಸಿದ್ದರು. ಹೀಗಿರುವಾಗ ಕೀರ್ತಿ ಮಾತ್ರ ಇವರು ಉಳಿಯಲು ಅರ್ಹರಲ್ಲ ಎಂದು ಭಾವಿಸಿದ್ದು ಯಾ?. ರೇಖಾರವರು ನಿಜಕ್ಕೂ ಓರ್ವ ಸ್ಟ್ರಾಂಗ್ ಸ್ಪರ್ಧಿ, ಮನೆ ಮಂದಿ ಎಲ್ಲರೂ ಅವರ ವರ್ತನೆ, ತಮನ್ನು ತಾವು ತೊಡಗಿಸಿಕೊಳ್ಳುವ ರೀತಿಯನ್ನು ಇಷ್ಟಪಡುತ್ತಾರೆ. ಹೀಗಿರುವಾಗ ಇವರು ಫೈನಲ್ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನೆಲ್ಲಾ ಗಮನಿಸಿಯೇ ಮುಂದೆ ಇವರು ತನಗೆ ತೊಡಕಾಗದಿರಲು ರೇಖಾರವರ ಹೆಸರು ಸೂಚಿಸದರಾ ಎಂಬ ಅನುಮಾನ ಮೂಡುತ್ತಿದೆ.
