ಅಭಿಮಾನಿಗಳೊಂದಿಗೆ ಕಿಚ್ಚ ಸುದೀಪ್ ಒಡನಾಟ ಅಮೋಘ. ಟ್ವೀಟ್ ಮಾಡಿದ ಬಹುತೇಕ ಅಭಿಮಾನಿಗಳಿಗೆ ತಪ್ಪದೇ ಪ್ರತಿಕ್ರಿಯೆ ನೀಡ್ತಾರೆ ಈ ಅಭಿನಯ ಚಕ್ರವರ್ತಿ. ಈ ಅಭಿಮಾನಿಗೂ ಹೋಗ್ತಾರಂತೆ. ಹಾಗಾದರೆ ಯಾರೀ ಅಭಿಮಾನ?

ಬೆಂಗಳೂರು: ಅಭಿಮಾನಿಗಳೊಂದಿಗೆ ಕಿಚ್ಚ ಸುದೀಪ್ ಒಡನಾಟ ಅಮೋಘ. ಟ್ವೀಟ್ ಮಾಡಿದ ಬಹುತೇಕ ಅಭಿಮಾನಿಗಳಿಗೆ ತಪ್ಪದೇ ಪ್ರತಿಕ್ರಿಯೆ ನೀಡ್ತಾರೆ ಈ ಅಭಿನಯ ಚಕ್ರವರ್ತಿ. 

ಕೇವಲ ನಟನೆ ಮಾತ್ರವಲ್ಲ, ಇದೀಗ ಬಿಗ್‌ಬಾಸ್ ನಡೆಸಿ ಕೊಡ್ಲಿಕ್ಕೆ ಆರಂಭಿಸಿದಾಗಿನಿಂದಲೂ ಮತ್ತಷ್ಟು ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಆ ಸಾಲಿನಲ್ಲಿಯೇ 82 ವರ್ಷದ ಅಭಿಮಾನಿ ಪದ್ಮಾವತಿ ತಾತಾಚಾರ್ ಸಹ ಹೌದು.

'ಬಿಗ್ ಬಾಸ್ ಅನ್ನು ಐದು ವರ್ಷಗಳಿಂದ ನೋಡುತ್ತಿದ್ದೇನೆ. ಅದರಲ್ಲಿಯೂ ವೀಕೆಂಡ್ ವಿಥ್ ಕಿಚ್ಚ ಬಹಳ ಖುಷಿ ಕೊಡುತ್ತದೆ. ನಿಮ್ಮ ಶ್ರಮದಿಂದಲೇ ಮೇಲೆ ಬಂದು, ಒಳ್ಳೆ ಹೆಸರು ಮಾಡಿದ್ದೀರಿ. ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದೀರಿ, ಎಂದು ಕೇಳಿದ್ದೇನೆ. ನಿಮ್ಮ, ಕುಟುಂಬದವರನ್ನು ದೇವರು ಚೆನ್ನಾಗಿ ಇಡಲಿ. ಲಕ್ಷ್ಮಿ ಟಾಕೀಸ್‌ ಹಿಂಭಾಗ ನಮ್ಮ ಮನೆ ಇದ್ದು, ಇಲ್ಲಿಗೆ ಬಂದಾಗ ಬಂದರೆ ತುಂಬಾ ಸಂತೋಷವಾಗುತ್ತದೆ,' ಎಂದು ಈ ವೃದ್ಧ ಅಭಿಮಾನಿ ಸುದೀಪ್‌ಗೆ ಯೂ ಟ್ಯೂಬ್‌ ಮೂಲಕ ಸಂದೇಶ ಕಳುಹಿಸಿದ್ದಾರೆ.

ಅದಕ್ಕೆ ಟ್ವೀಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ನಟ, 'ಮಾತು ಬಾರದಂತಾಗಿದೆ. ವಯಸ್ಸು ಕೇವಲ ಸಂಖ್ಯೆಯಷ್ಟೇ. ನಿಮ್ಮಂಥವರ ಅಭಿಮಾನ ಪಡೆದಿದ್ದೇ ನನ್ನ ಜೀವನದ ದೊಡ್ಡ ಸಾಧನೆ. ನಿಮ್ಮ ಮನೆಗೆ ಖಂಡಿತಾ ಬರುತ್ತೇನೆ,' ಎಂದು ಭರವಸೆ ನೀಡಿದ್ದಾರೆ. 

Scroll to load tweet…