ಎಲ್ಲಾ ರೀತಿಯ ಪಾತ್ರವನ್ನು ಮಾಡಿ ಸೈ ಎನಿಸಿಕೊಂಡಿರುವ ಕಿಚ್ಚ ಇದೀಗ ಕೃಷ್ಣಾವಾತಾರ ತಾಳಿದ್ದಾರೆ. ಕೈಯಲ್ಲಿ ಕೊಳಲು, ಮಂದಹಾಸ, ತಲೆ ಮೇಲೆ ಪಗಡಿ ಧರಿಸಿ ಸಾಕ್ಷಾತ್ ಕೃಷ್ಣನಾಗಿದ್ದಾರೆ. ಹಿಂದಿಯ ಓ ಮೈ ಗಾಡ್ ಚಿತ್ರವನ್ನು ಕನ್ನಡಕ್ಕೆ ನಿರ್ದೇಶಕ ನಂದ ಕಿಶೋರ್ ರಿಮೇಕ್ ಮಾಡುತ್ತಿದ್ದಾರೆ.
ಬೆಂಗಳೂರು: ಕಿಚ್ಚ ಸುದೀಪ್ ಹೊಸ ಅವತಾರದಲ್ಲಿ ತೆರೆ ಮೇಲೆ ಬರುತ್ತಿದ್ದಾರೆ. ಈ ಬಾರಿ ವಿಶೇಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಎಲ್ಲಾ ರೀತಿಯ ಪಾತ್ರವನ್ನು ಮಾಡಿ ಸೈ ಎನಿಸಿಕೊಂಡಿರುವ ಕಿಚ್ಚ ಇದೀಗ ಕೃಷ್ಣಾವಾತಾರ ತಾಳಿದ್ದಾರೆ. ಕೈಯಲ್ಲಿ ಕೊಳಲು, ಮಂದಹಾಸ, ತಲೆ ಮೇಲೆ ಪಗಡಿ ಧರಿಸಿ ಸಾಕ್ಷಾತ್ ಕೃಷ್ಣನಾಗಿದ್ದಾರೆ. ಹಿಂದಿಯ ಓ ಮೈ ಗಾಡ್ ಚಿತ್ರವನ್ನು ಕನ್ನಡಕ್ಕೆ ನಿರ್ದೇಶಕ ನಂದ ಕಿಶೋರ್ ರಿಮೇಕ್ ಮಾಡುತ್ತಿದ್ದಾರೆ. ಚಿತ್ರದ ಹೆಸರು ಮುಕುಂದ ಮುರಾರೆ. ಈ ಚಿತ್ರದಲ್ಲಿ ಇನ್ನೊಂದು ಇಂಟರೆಸ್ಟಿಂಗ್ ವಿಚಾರವೆಂದರೆ ರಿಯಲ್ ಸ್ಟಾರ್ ಉಪ್ಪಿ ನಾಸ್ತಿಕನಾಗಿ ನಟಿಸುತ್ತಿದ್ದಾರೆ.
ಗೋಪಾಲ ಗೋಪಾಲ ಚಿತ್ರದಲ್ಲಿ ಪವರ್ ಸ್ಟಾರ್ ಕಲ್ಯಾಣ್ ಕೃಷ್ಣನಾಗಿ ಅಭಿನಯಿಸಿ ಪ್ರೇಕ್ಷಕರಿಗೆ ಹೊಸ ಅನುಭವ ಕಟ್ಟಿಕೊಟ್ಟರು. ಓ ಮೈ ಗಾಡ್ ಚಿತ್ರದಲ್ಲಿ ಕೃಷ್ಣನಾಗಿ ಅಕ್ಕಿ ಮನಗೆದ್ದರು. ಈಗ ಮುಕುಂದ ಮುರಾರೆ ಚಿತ್ರದಲ್ಲಿ ಕೃಷ್ಣನಾಗಿ ಸುದೀಪ್ ಹೇಗೆ ವಿರಾಟ್ ರೂಪ ತೋರಿಸ್ತಾರೆ ಅಂತ ಕಾದು ನೋಡಬೇಕು. ಸೆಪ್ಟೆಂಬರ್ ನಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.
