ಟಗರು ಚಿತ್ರವನ್ನು ಮೆಚ್ಚಿ ವಿಮರ್ಶೆ ಬರೆದ ಸುದೀಪ್; ವೈರಲ್ ಆಯ್ತು ಕಿಚ್ಚನ ಟ್ವೀಟ್

First Published 6, Mar 2018, 9:40 AM IST
Kiccha tweet become viral
Highlights

ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಚಿತ್ರವನ್ನು ಸುದೀಪ್ ಮೆಚ್ಚಿಕೊಂಡಿದ್ದಾರೆ. ಮೆಚ್ಚಿಕೊಂಡಿದ್ದಷ್ಟೇ ಅಲ್ಲ,  ಚಿತ್ರದ ಬಗ್ಗೆ ಸುದೀರ್ಘ ಪತ್ರವನ್ನೇ ಬರೆದಿದ್ದಾರೆ.

ಬೆಂಗಳೂರು (ಮಾ. 06): ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಚಿತ್ರವನ್ನು ಸುದೀಪ್ ಮೆಚ್ಚಿಕೊಂಡಿದ್ದಾರೆ. ಮೆಚ್ಚಿಕೊಂಡಿದ್ದಷ್ಟೇ ಅಲ್ಲ,  ಚಿತ್ರದ ಬಗ್ಗೆ ಸುದೀರ್ಘ ಪತ್ರವನ್ನೇ ಬರೆದಿದ್ದಾರೆ.

ಸಾಮಾನ್ಯ ಪ್ರೇಕ್ಷಕರಂತೆ ಸಿನಿಮಾ ವೀಕ್ಷಣೆ ಮಾಡಿ ಚಿತ್ರದ ಬಗ್ಗೆ ಬರೆದಿರುವ ಕಿಚ್ಚ ಸುದೀಪ್ ವರಸೆ ಚಿತ್ರಪ್ರೇಮಿಗಳಿಗೆ ಖುಷಿ ಕೊಟ್ಟಿದೆ.  ‘ಸಿನಿಮಾದ ನಿರೂಪಣೆ ತುಂಬಾ ಚೆನ್ನಾಗಿದೆ. ತೆರೆ ಮೇಲೆ ಬರುವ ಪ್ರತಿ ಪಾತ್ರವೂ ಜನರನ್ನು ಕನ್ಫ್ಯೂಸ್ ಮಾಡುತ್ತವೆ. ಚಿತ್ರರಂಗದಲ್ಲಿ ಕಥೆ  ಹೇಳುವ ವಿಭಿನ್ನ ಪ್ರಯತ್ನ ಚೆನ್ನಾಗಿ ಆಗಿದೆ. ಇಂತಹ ಚಿತ್ರ ಸೂರಿಯಿಂದ ಮಾತ್ರ ಸಾಧ್ಯ’ ಎಂಬುದಾಗಿ ಅವರು ನಿರ್ದೇಶಕ ಸೂರಿ ಕೆಲಸದ  ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಅನಂತರ ‘ಶಿವರಾಜ್ ಕುಮಾರ್ ಅವರ ಬಗ್ಗೆ ಮಾತನಾಡುವುದಾದರೆ ಎನರ್ಜಿ, ಅಭಿನಯ  ಎಲ್ಲವೂ ಚೆನ್ನಾಗಿವೆ. ತೆರೆ ಮೇಲೆ ಅದ್ಭುತವಾಗಿ  ಕಾಣಿಸುತ್ತಾರೆ’ ಎಂದು ಶಿವಣ್ಣ ಅಭಿನಯಕ್ಕೆ ಹ್ಯಾಟ್ಸಾಪ್ ಎಂದಿದ್ದಾರೆ ಸುದೀಪ್.
‘ಧನಂಜಯ್ ಪಾತ್ರ ಮತ್ತು ಅಭಿನಯ ಎರಡು ಚೆನ್ನಾಗಿವೆ. ವಶಿಷ್ಟ ಸಿಂಹ ಅವರ ಧ್ವನಿ ಎಲ್ಲರ ಗಮನ ಸೆಳೆಯುವಂತೆ ಮಾಡುತ್ತದೆ. ಈ  ಸಿನಿಮಾದಲ್ಲಿ ಸಂಗೀತ ಪ್ರಮುಖ ಪಾತ್ರ ವಹಿಸುತ್ತದೆ. ಸಂಗೀತ ನಿರ್ದೇಶನ ನೀಡಿದ ಪುಟ್ಟ  ಹುಡುಗನಿಗೆ ಅಭಿನಂದನೆ’ ಎಂದು ಚರಣ್‌ರಾಜ್ ಅವರನ್ನು ಬಹಳ ಮೆಚ್ಚಿಕೊಂಡಿದ್ದಾರೆ.

ಕನ್ನಡದ ಮಟ್ಟಿಗೆ ಒಬ್ಬ ಸ್ಟಾರ್ ನಟ ಮತ್ತೊಬ್ಬ ಸ್ಟಾರ್ ನಟನ ಚಿತ್ರವನ್ನು ಸಾಮಾನ್ಯ ಪ್ರೇಕ್ಷಕನಂತೆ ನೋಡಿ, ತಮ್ಮದೇ ಶೈಲಿಯಲ್ಲಿ ವಿಮರ್ಶೆ ಮಾಡಿದ್ದು ಅಪರೂಪ. ಅಂತಹ ಅಪರೂಪದ
ಕೆಲಸದಿಂದ ಚಿತ್ರೋದ್ಯಮದ ಗಮನ ಸೆಳೆದಿದ್ದಾರೆ ಕಿಚ್ಚ ಸುದೀಪ್.   

loader