ರಾಜು ಕನ್ನಡ ಮೀಡಿಯಂನಲ್ಲಿ ಕಿಚ್ಚನ ಪಾತ್ರವೇನು?

entertainment | Thursday, January 11th, 2018
Suvarna Web Desk
Highlights

ಗುರುನಂದನ್ ನಟಿಸಿರುವ ಇದೇ ತಿಂಗಳು 19ಕ್ಕೆ ತೆರೆಗೆ ಬರಲಿರುವ ‘ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ನಟ ಸುದೀಪ್  ಅವರ ಪಾತ್ರ ಏನೆಂಬುದು ಈಗೀಗ ಬಹಿರಂಗವಾಗುತ್ತಿದೆ.

ಬೆಂಗಳೂರು (ಜ.11): ಗುರುನಂದನ್ ನಟಿಸಿರುವ ಇದೇ ತಿಂಗಳು 19ಕ್ಕೆ ತೆರೆಗೆ ಬರಲಿರುವ ‘ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ನಟ ಸುದೀಪ್  ಅವರ ಪಾತ್ರ ಏನೆಂಬುದು ಈಗೀಗ ಬಹಿರಂಗವಾಗುತ್ತಿದೆ.

ಬ್ಯುಸಿನೆಸ್ ಮ್ಯಾನ್ ಆಗಿ ಕಾಣಿಸಿಕೊಳ್ಳುತ್ತಿರುವ ಸುದೀಪ್ ಅವರದ್ದು ಪಕ್ಕಾ ನೆಗೆಟಿವ್ ಪಾತ್ರವಂತೆ. ಅಲ್ಲದೆ ಸುದೀಪ್  ಅವರ ಪಾತ್ರವನ್ನು ಉದ್ಯಮಿ ವಿಜಯ್ ಮಲ್ಯ ಅವರ ವ್ಯಕ್ತಿತ್ವಕ್ಕೆ ಹತ್ತಿರವಿರುವಂತೆ ಇಡೀ ಪಾತ್ರವನ್ನು ನಿರ್ದೇಶಕ ನರೇಶ್ ಕುಮಾರ್ ರೂಪಿಸಿದ್ದಾರಂತೆ. ಹೀಗಾಗಿ ಚಿತ್ರದಲ್ಲಿ ನಾಯಕ ಗುರುನಂದನ್ ಅವರಿಗೆ ರೋಲ್‌ಮಾಡೆಲ್ ಆಗಿದ್ದುಕೊಂಡೇ ತಮ್ಮ ಮತ್ತೊಂದು ಮುಖವನ್ನು ತೋರಿಸುತ್ತಾರೆ. ತೆಲುಗಿನ ‘ಈಗ’ ಚಿತ್ರದಲ್ಲಿ ಯಾವ ರೀತಿ ನಾಯಕಿ ಸಮಂತಾ ಅವರ ಮುಂದೆ ಒಳ್ಳೆಯವರಾಗಿ ಕಾಣಿಸಿಕೊಳ್ಳುತ್ತಲೇ ತಮ್ಮ ಅಸಲಿ ರೂಪವನ್ನು ಹೊರಗಿಡುತ್ತಾರೋ ಅದೇ ರೀತಿ ‘ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲೂ ನಾಯಕ ಗುರುನಂದನ್ ಹಾಗೂ ನಾಯಕಿ ಆವಂತಿಕಾ ಶೆಟ್ಟಿ ಅವರನ್ನು ಕಿಚ್ಚ ಕಾಡುತ್ತಾರಂತೆ. ಚಿತ್ರದಲ್ಲಿ ಅವರದ್ದು ವಿಲನ್ ಪಾತ್ರ ಮಾಡಿರುವುದು ನಿಜವೆಂದು ಆ ಮೂಲಕ ಚಿತ್ರತಂಡ ಮಾಹಿತಿ ಕೊಟ್ಟಿದೆ. ಹೀಗಾಗಿ ಪರಭಾಷೆಗಳಲ್ಲೇ ವಿಲನ್ ಆಗಿ ಕಾಣಿಸಿಕೊಂಡವರು ಈಗ ಕನ್ನಡದಲ್ಲೂ ವಿಲನ್ ಆಗಿದ್ದಾರೆ ಸುದೀಪ್. ಕಿಚ್ಚನ ಈ ಪಾತ್ರವನ್ನು ಅವರ ಅಭಿಮಾನಿಗಳು ಹೇಗೆ ತೆಗೆದುಕೊಳ್ಳುತ್ತಾರೋ ನೋಡಬೇಕಿದೆ.

 

Comments 0
Add Comment