ಸಲ್ಮಾನ್ ಖಾನ್ ಚಿತ್ರದಲ್ಲಿ ಕಿಚ್ಚ ವಿಲನ್ ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 17, Jul 2018, 3:31 PM IST
Kiccha Sudeep to negative role in Dabangg 3 ?
Highlights

  • ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3 ಚಿತ್ರದಲ್ಲಿ ಅಭಿನಯ ಸಾಧ್ಯತೆ ?
  • ಪ್ರಭುದೇವಾ ನಿರ್ದೇಶನ, 2020ಕ್ಕೆ ತೆರೆಗೆ ?

ಮುಂಬೈ[ಜು.17]: ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ತನ್ನದೆ ಛಾಪು ಮೂಡಿಸಿಕೊಂಡಿರುವ ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ಸಲ್ಮಾನ್ ಖಾನ್ ಅಭಿನಯದ ಬಾಲಿವುಡ್ ಚಿತ್ರ ದಬಾಂಗ್ 3 ನಲ್ಲಿ ಅಭಿನಯಿಸುವ ಸಾಧ್ಯತೆಯಿದೆ.

ಮೂಲಗಳ ಪ್ರಕಾರ ದಬಾಂಗ್ 3 ನಲ್ಲಿ ಸುದೀಪ್ ವಿಲನ್ ಅಥವಾ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಚಿತ್ರತಂಡ ಈಗಾಗಲೇ ಕಿಚ್ಚ ಅವರನ್ನು ಸಂಪರ್ಕಿಸಿದೆ. ಅವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎನ್ನಲಾಗಿದೆ. ದಬಾಂಗ್ ಮೂರನೇ ಭಾಗವನ್ನು ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವಾ ನಿರ್ದೇಶಿಸಲಿದ್ದು 2020ಕ್ಕೆ ತೆರೆಗೆ ಬರಲಿದೆ.

ಸಲ್ಮಾನ್ ಖಾನ್ ಅಭಿನಯದ ಟೈಗರ್ ಜಿಂದಾ ಹೈ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಸಿಸಿಎಲ್ ಮೂಲಕ ಸುದೀಪ್ ಅವರಿಗೆ ಸಲ್ಮಾನ್ ಖಾನ್ ಹಾಗೂ ಅವರ ಸಹೋದರ ಅರ್ಬಾಜ್ ಖಾನ್ ತುಂಬ ಆಪ್ತರಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಸುದೀಪ್ ಅವರ ಹಲವು ಕನ್ನಡ ಚಿತ್ರಗಳನ್ನು ಸಲ್ಮಾನ್ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಕಿಚ್ಚ ಕೂಡ ಈಗಾಗಲೇ ಬಾಲಿವುಡ್'ನ ಫೂಂಕ್ 2 , ರಣ್ ಚಿತ್ರಗಳಲ್ಲಿ ನಟಿಸಿದ್ದಾರೆ.

loader