ಈ ಇಬ್ಬರು ನಟರು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಮಾಡಿದವರು. ಈ ಡೆಡ್ಲಿ ಕಾಂಬಿನೇಷನ್ ಬೇಕೆಂದು ಕಾಯುತ್ತಿದ್ದವರಿಗೆ ಗುಡ್ ನ್ಯೂಸ್ ಇಲ್ಲಿದೆ.

ಬಾಲಿವುಡ್ ಸುಲ್ತಾನ್ ಅಭಿನಯದ ‘ದಬಾಂಗ್ 3’ ಚಿತ್ರದಲ್ಲಿ ಸ್ಯಾಂಡಲ್ ವುಡ್ ಚಕ್ರವರ್ತಿ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯಕ್ಕೆ ಕನ್ನಡದ ‘ಪೈಲ್ವಾನ್’ ಹಾಗೂ ತೆಲುಗಿನ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ಬ್ಯುಸಿ ಇದ್ದು ಆ ನಂತರ ‘ಕೋಟಿಗೊಬ್ಬ 3’ ಚಿತ್ರದಲ್ಲಿ ಅಭಿನಯಿಸುವ ಪ್ಲ್ಯಾನ್ ಇದೆ ಎಂದಿದ್ದಾರೆ. ಮೇ ತಿಂಗಳಲ್ಲಿ ‘ದಬಾಂಗ್-3’ ಚಿತ್ರೀಕರಣ ಶುರು ಮಾಡಲಿದ್ದಾರೆ.

ಯಂಗ್ ಆ್ಯಂಡ್ ಎನರ್ಜಿಟಿಕ್ ಪ್ರಭುದೇವ್ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದು, ಅರ್ಬಾಜ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ. ಡಬಾಂಗ್-3 ಚಿತ್ರದ ಸಾಂಗ್ ಶೂಟಿಂಗ್ ಗಾಗಿ ಅದ್ದೂರಿ ಸೆಟ್ ಹಾಕಿದ್ದು ಸುಮಾರು 500 ಜೂನಿಯರ್ ಆರ್ಟಿಸ್ಟ್ ಭಾಗಿ ಆಗಿದ್ದಾರೆ.